ಬುಧವಾರ, ಸೆಪ್ಟೆಂಬರ್ 30, 2020
26 °C

ಶೆರ್ಲಿನ್ಗೆ ಪ್ರಶಸ್ತಿ ಬೇಕಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೆರ್ಲಿನ್ಗೆ ಪ್ರಶಸ್ತಿ ಬೇಕಂತೆ!

ಮೊನ್ನೆ ಮೊನ್ನೆವರೆಗೂ ರ‌್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ, ಕೈಯಲ್ಲಿ ಮೈಕ್ ಹಿಡಿದು ಹಾಡು ಹಾಡುತ್ತಿದ್ದ ಹುಡುಗಿ ಬಾಲಿವುಡ್ ಓಣಿಯಲ್ಲಿ ಕಾಣಿಸಿಕೊಂಡಾಗ ಕೆಲವರು ಹುಬ್ಬು ಹಾರಿಸಿ ನೋಡಿದ್ದರು. ಒಂದು ದಿನ ಆ ಹುಡುಗಿ ಏಕಾಏಕಿ ಪ್ಲೇ ಬಾಯ್ ನಿಯತಕಾಲಿಕೆಯ ಮುಖಪುಟಕ್ಕಾಗಿ ಬತ್ತಲಾದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದರು.ಆಕೆಯ ಹೆಸರು ಶೆರ್ಲಿನ್ ಚೋಪ್ರಾ. ಪ್ಲೇಬಾಯ್ ಮ್ಯಾಗಜಿನ್ ಮುಖಪುಟಕ್ಕಾಗಿ ಬೆತ್ತಲಾದ ದೇಶದ ಮೊದಲ ರೂಪದರ್ಶಿ ಎಂಬ (ಕು)ಖ್ಯಾತಿ ಕೂಡ ಈಕೆಗಿದೆ. ಹೀಗೆ ಒಮ್ಮಿಂದೊಮ್ಮೆಲೆ ಬೆಳಕಿಗೆ ಬಂದ ಶೆರ್ಲಿನ್, ನಂಗೂ ಭಾರತರತ್ನ ಪ್ರಶಸ್ತಿ ಬೇಕು ಅಂತ ಹೇಳಿ ಎಲ್ಲರನ್ನೂ ಮತ್ತೊಮ್ಮೆ ಬೆಚ್ಚಿ ಬೀಳಿಸಿದ್ದಾಳೆ. ಈ ಮೂಲಕ ಭಾರತರತ್ನ ಪ್ರಶಸ್ತಿ ನೀಡಬೇಕಾದರೆ ಅನುಸರಿಸುವ ಮಾನದಂಡಗಳ ಸಮೀಕರಣದ ಬುಡವನ್ನೇ ಹಿಡಿದು ಅಲುಗಾಡಿಸುತ್ತಿದ್ದಾಳೆ.`ಪ್ಲೇಬಾಯ್~ ನಿಯತಕಾಲಿಕೆಯ ಮುಖಪುಟಕ್ಕೆ ಬೆತ್ತಲಾದಾಗ ವಿಮರ್ಶಕರು ಅಥವಾ ಆ ಕುರಿತು ಮಾತನಾಡುವವರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಶೆರ್ಲಿನ್ ಮುಂದೆ ಕೂಡ ಬಿಂದಾಸ್ ಅವತಾರಗಳಲ್ಲೇ ಕಾಣಿಸಿಕೊಳ್ಳುತ್ತಾ ಬಂದಳು. ಹೀಗೆ ಅಡ್ಡದಾರಿಯಲ್ಲೇ ಸಾಕಷ್ಟು ಇಮೇಜ್ ಹೆಚ್ಚಿಸಿಕೊಳ್ಳುತ್ತಾ ಬಂದ ಈಕೆ ದೇಶದ ಅತ್ಯುನ್ನದ ಗೌರವವಾದ ಭಾರತರತ್ನ ಪ್ರಶಸ್ತಿ ತನಗೆ ನೀಡಬೇಕು ಅಂತ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾಳೆ.ಅದಕ್ಕೆ ಆಕೆ ಕೊಟ್ಟಿರುವ ಕಾರಣ ಹೀಗಿದೆ ನೋಡಿ: `ನನ್ನ ಒನಪು-ವಯ್ಯಾರ ಎಲ್ಲವನ್ನೂ ಅನೇಕರು ಕಣ್ಣೆವೆಯಿಕ್ಕದೆ ನೋಡಿ ಖುಷಿಪಟ್ಟಿದ್ದಾರೆ. ಆ ವೇಳೆ ಎಲ್ಲರೂ ನನ್ನ ಬಗ್ಗೆ ಮಾತನಾಡಿದ್ದಾರೆ. ಚರ್ಚೆ ಮಾಡಿದ್ದಾರೆ. ಹೀಗೆ ಎಲ್ಲರ ಮನಸ್ಸಿನಲ್ಲೂ ಒಂದು ಸಂಚಲನವನ್ನು ಹುಟ್ಟುಹಾಕಿದ ನಾನು ಈ ಪ್ರಶಸ್ತಿ ಪಡೆಯಲು ಅರ್ಹಳಿದ್ದೇನೆ. ಹಾಗಾಗಿ ನನಗೆ ಭಾರತ ರತ್ನ ಕೊಡಬೇಕು; ಸೀರಿಯಸ್‌ಲೀ!~  ಅಂತ ಶೆರ್ಲಿನ್ ತನ್ನದೇ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾಳೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.