ಶನಿವಾರ, ಜನವರಿ 25, 2020
16 °C

ಶೆಹಾನ್ ಕರುಣತಿಲಕಗೆ ದಕ್ಷಿಣ ಏಷ್ಯಾ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಐಎಎನ್‌ಎಸ್): ಸಾಹಿತ್ಯ ಕ್ಷೇತ್ರದ ಸಾಧನೆಗೆ ನೀಡುವ ಪ್ರತಿಷ್ಠಿತ ಡಿಎಸ್‌ಸಿ ದಕ್ಷಿಣ ಏಷ್ಯಾ ಪ್ರಶಸ್ತಿಯನ್ನು ಶ್ರೀಲಂಕಾದ ಯುವ ಕಾದಂಬರಿ ಕಾರ ಶೆಹಾನ್ ಕರುಣತಿಲಕ ಅವರಿಗೆ ನೀಡಲಾಗಿದೆ.ಶೆಹಾನ್ ಅವರ ಮೊದಲ ಕಾದಂಬರಿ `ಚೀನಾಮನ್: ದಿ ಲೆಜೆಂಡ್ ಆಫ್ ಪ್ರದೀಪ್ ಮ್ಯಾಥ್ಯೂ~ ಕೃತಿಗೆ ಈ ಬಹುಮಾನ ನೀಡಲಾಗಿದ್ದು, 27 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ಯನ್ನು ಭೂತಾನ್ ರಾಣಿ ಅಶಿ ದೋರ್ಜಿ ವಾಂಗ್ಮೊ ವಾನ್‌ಚುಕ್ ಅವರು ಪ್ರದಾನ ಮಾಡಿದರು. ಈ ಸಲದ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಕನ್ನಡದ ಖ್ಯಾತ ಸಾಹಿತಿ ಯು.ಆರ್. ಅನಂತಮೂರ್ತಿಯವರ `ಭಾರತೀಪುರ~ ಕೂಡಾ ಸೇರಿತ್ತು ಎನ್ನಲಾಗಿದೆ.

 

ಪ್ರತಿಕ್ರಿಯಿಸಿ (+)