ನವದೆಹಲಿ (ಪಿಟಿಐ): ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಹತ್ಯೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ಪ್ರಕರಣದ ಆರೋಪಿ ಸಾಕಿಬ್ ಅಲಿಯ ಸೂಚನೆಯ ಅನ್ವಯ ಮಸೂದ್ ಅವರ ಹತ್ಯೆಗೆ ಬಳಸಲಾಗಿದ್ದ ನಾಡ ಬಂದೂಕು ಮತ್ತು ಗುಂಡನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಶೆಹ್ಲಾ ಹತ್ಯೆಯ ಮುಖ್ಯ ಸೂತ್ರಧಾರ ಎನ್ನಲಾದ ಜಹೇದಾ ಪರ್ವೇಜ್ ಮತ್ತು ಬಾಡಿಗೆ ಕೊಲೆಗಾರರ ನಡುವೆ ಮುಖ್ಯ ಸಂಪರ್ಕ ವ್ಯಕ್ತಿಯಾಗಿ ಅಲಿ ಕೆಲಸ ನಿರ್ವಹಿಸಿದ್ದ. ಹತ್ಯೆಯ ಬಳಿಕ ಜಹೇದಾ ಕೊಲೆಗಾರರಿಗೆ ಮೂರು ಲಕ್ಷ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಐವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಿಜೆಪಿ ಶಾಸಕ ಧೃವ ನಾರಾಯಣ್ ಸಿಂಗ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.