ಬುಧವಾರ, ಜನವರಿ 29, 2020
24 °C

ಶೌಚಾಲಯ ನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: ಇಲ್ಲಿಯ 6ನೇ ವಾರ್ಡ್‌­ನಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಮಹಿಳೆಯರು ಸ್ಥಳೀಯ ಪುರಸಭೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ  ನಡೆಸಿದರು. 6ನೇ ವಾರ್ಡ್‌ನಲ್ಲಿ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಪುರಸಭೆ­ಯಿಂದ ಟೆಂಡರ್ ಕರೆದು ಹಲವಾರು ವರ್ಷಗಳಾಗಿದ್ದರೂ ಸಹ ಇನ್ನೂವರೆಗೆ ಕಾಮಗಾರಿ ಪ್ರಾರಂಭಗೊಂಡಿಲ್ಲ. ಇಲ್ಲಿಯ ಮಹಿಳೆಯರ ಸಮಸ್ಯೆಯನ್ನು ಅರಿತು ಬೇಗನೆ ಮಹಿಳೆಯರಿಗೆ ಶೌಚಾ­ಲಯಗಳನ್ನು ನಿರ್ಮಿಸಿಕೊಡಬೇಕು.ಇದರಿಂದ 4,5 ಮತ್ತು 6ನೇ ವಾರ್ಡ್‌ನ ಮಹಿಳೆಯರಿಗೂ ಅನು­ಕೂಲ­ವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.  ಮಹಿಳೆಯರ ಶೌಚಾಲಯ ನಿರ್ಮಿ­ಸುವಲ್ಲಿ ಪುರಸಭೆ­ಯವರು ಹಿಂದೆಟು ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಸ್ಯೆಯನ್ನು ಅರಿತುಕೊಂಡು ಕೂಡಲೇ ಮಹಿಳೆಯರಿಗೆ ಶೌಚಾಲಯ­ಗಳನ್ನು ನಿರ್ಮಿಸಿ­ಕೊಡಬೇಕು ಇಲ್ಲದಿದ್ದರೆ ಚಂಬು ಹಿಡಿದು ಪ್ರತಿಭಟನೆ  ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಬಿಜೆಪಿ ಉಪಾಧ್ಯಕ್ಷ ಪ್ರಕಾಶ ಮಾದರ, ಕುಮಾರ ಗಿರಡ್ಡಿ, ಹನಮಂತ ಸತರಡ್ಡಿ, ಮುಬಾರಕ ಡಾಂಗೆ, ವಾದುರಾಜ ದೇಸಾಯಿ, ರಾಘವೇಂದ್ರ ಪಾಟೀಲ ಮತ್ತಿತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)