ಶ್ಯಾಮಲೆಯ ಕಾಲು...

ಸೋಮವಾರ, ಮೇ 27, 2019
33 °C

ಶ್ಯಾಮಲೆಯ ಕಾಲು...

Published:
Updated:

`ನನ್ನ ಕಾಲು

ನೆಲದ ಮೇಲೆ ಇರುವಂತೆ

ನೋಡಿಕೊಳ್ಳುತ್ತೇನೆ~

(ಪ್ರ ವಾ ಸೆ.13);

ಅಂಗೋಲಾದ ಕಪ್ಪುಸುಂದರಿ

ಉಲಿದಿದ್ದಾಳೆ ಆನಂದಬಾಷ್ಪದ     ನಡುವೆ;

ಹಾರೈಸೋಣ ಹಾಗೇಯೇ

ಆಗಲಿ ಎಂದು

ವಿಶ್ವಸುಂದರಿಯೆಂದು    ಎದೆ ಉಬ್ಬಿಸಿಕೊಂಡು

ಇಡದಿರಲಿ ಆಕೆ ಯಾರ ತಲೆಯ

ಮೇಲೂ ತನ್ನ ಕಾಲನ್ನ;

ಧರೆಯ ಮೇಲಿನ ಚೆಂದುಳ್ಳಿ ಶ್ಯಾಮಲೆಗೆ

ಬಾರದಿರಲಿ ಬೆಡಗು ಬಿನ್ನಾಣ

ಮುಪ್ಪು ಕಾಡುವ ಮುನ್ನ...!

-ಎಲ್.ಎಚ್.ಅರುಣಕುಮಾರ್, ದಾವಣಗೆರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry