ಭಾನುವಾರ, ಜನವರಿ 26, 2020
23 °C

ಶ್ರೀಮಂತ ತೆರಿಗೆದಾರರಲ್ಲಿ ಸಿಬಿಐ ಆರೋಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆದಾಯ ತೆರಿಗೆ ಪಾವತಿದಾರರ ೨೦೧೧–೧೨ನೇ ಸಾಲಿನ ವೈಯಕ್ತಿಕ ವಿಭಾಗದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಆರೋಪಿಗಳು ಕೂಡ ಉನ್ನತ ಹತ್ತು ಗಳಿಕೆದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಆರ್‌ಟಿಐ ಮಾಹಿ­ತಿಯಿಂದ ಬಹಿ­ರಂಗವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಆರ್‌ಟಿಐ ಕಾರ್ಯಕರ್ತ ಸುಭಾಷ್‌  ಅಗರವಾಲ್‌ ಸಲ್ಲಿಸಿದ ಅರ್ಜಿಗೆ ನೀಡಿದ ಉತ್ತರ­ದಲ್ಲಿ ಆದಾಯ ತೆರಿಗೆ ಇಲಾಖೆ ಈ ಬಗೆಗಿನ ಅಂಕಿ–ಅಂಶ­ವನ್ನು ನೀಡಿದೆ.ಪಟ್ಟಿಯಲ್ಲಿ ಶಿರೀನ್‌ ಮೊದಲ ಸ್ಥಾನ­ದಲ್ಲಿದ್ದಾರೆ. ಕಲ್ಲಿದ್ದಲು ಹಗ­ರ­ಣದಲ್ಲಿ ಸಿಬಿಐ ತನಿಖೆ ಎದು­ರಿ­ಸುತ್ತಿ­ರುವ ಕಮಲ್‌ ಸ್ಪಾಂಜ್‌ ಸ್ಟೀಲ್‌ ಮತ್ತು ಪವರ್‌ ಕಂಪೆನಿ ನಿರ್ದೇ­ಶ­ಕ­ರಾದ ಕಮಲ್‌­ಜೀತ್‌ ಸಿಂಗ್‌ ಅಹ್ಲು­ವಾಲಿಯಾ ಮತ್ತು ಪ್ರಶಾಂತ್‌ ಕುಮಾರ್‌ ಅಹ್ಲು­ವಾಲಿಯಾ ತಲಾ ಎರಡನೇ ಮತ್ತು ಒಂಬ­ತ್ತನೇ ಸ್ಥಾನದಲ್ಲಿ­ದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ­ದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ, ಸಂಸದ ವೈ.ಎಸ್‌. ಜಗನ್‌­ಮೋಹನ್‌ ರೆಡ್ಡಿ ಮೂರನೇ ಸ್ಥಾನದಲ್ಲಿ­ದ್ದಾರೆ.ಪಟ್ಟಿಯ ಟ್ರಸ್ಟ್ ವಿಭಾಗದಲ್ಲಿ ಭಾರ­ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹತ್ತರೊಳಗಿನ ಸ್ಥಾನವನ್ನು ಹಾಗೂ ಕಂಪೆನಿ ವಿಭಾಗ­ದಲ್ಲಿ ಮೊದ­ಲೆರಡು ಸ್ಥಾನ­ವನ್ನು ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಮತ್ತು ಬ್ಯಾಂಕಿಂಗ್‌ ವಲಯದ ಎಸ್‌ಬಿಐ ಪಡೆದಿವೆ. ವೈಯಕ್ತಿಕ ವಿಭಾಗದ ಪಟ್ಟಿಯಲ್ಲಿ ರಾಮ­ಮೂರ್ತಿ ಪ್ರವೀಣ್‌ಚಂದ್ರ, ಅಸೀಂ ಘೋಷ್‌, ಇಂದ್ರಾಣಿ ಪಟ್ನಾಯಕ್‌, ಸಂಧಿಯಗು ಮಾರ್ಟಿನ್‌, ಮನ್ಸೂರ್‌ ನಿಜಾಮ್‌ ಪಟೇಲ್‌, ಬವಿಹಳ್ಳಿ ರುದ್ರ­ಗೌಡ ಸ್ಥಾನ ಪಡೆದಿದ್ದಾರೆ.‘ಸರ್ಕಾರದ ಅಧೀನ ಸಂಸ್ಥೆ’ಗಳ ವಿಭಾಗ­ದಲ್ಲಿ ತೈಲೋದ್ಯಮ ಅಭಿವೃದ್ಧಿ ಮಂಡಳಿ ಮೊದಲ ಸ್ಥಾನದಲ್ಲಿದೆ. ನಂತ­ರದಲ್ಲಿ ಉತ್ತರಪ್ರದೇಶ ಅವಾಸ್‌ ಈವಮ್‌ ವಿಕಾಸ್‌ ಪರಿಷತ್‌, ಡಿಎಸ್‌ಪಿ ಬ್ಯಾಕ್‌,­ರಾಕ್‌ ಮ್ಯೂಚುವಲ್‌ ಫಂಡ್‌, ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌, ಕೋಲ್ಕತ್ತ ಪೋರ್ಟ್‌ ಟ್ರಸ್ಟ್‌, ಆಂಧ್ರಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್‌, ಬರೋಡಾ­– ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್‌, ಪ್ರಥಮಾ ಬ್ಯಾಂಕ್‌, ಟೋಯೊಟಾ ಮೋಟಾರ್‌ ಕಾರ್ಪೊರೇ­ಷನ್‌ ಹಾಗೂ ಛತ್ತೀಸಗಡ ಗ್ರಾಮೀಣ ಬ್ಯಾಂಕ್‌ ಸ್ಥಾನ ಪಡೆದಿವೆ.

ಪ್ರತಿಕ್ರಿಯಿಸಿ (+)