ಶ್ರೀರಾಮಚಂದ್ರ ಬ್ರಹ್ಮರಥೋತ್ಸವ

7

ಶ್ರೀರಾಮಚಂದ್ರ ಬ್ರಹ್ಮರಥೋತ್ಸವ

Published:
Updated:

ಮುಳಬಾಗಲು: ಪಟ್ಟಣದ ಅಗ್ರಹಾರದ ಕಟ್ಟಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಮಧ್ವನವಮಿ ಪ್ರಯುಕ್ತ ಸೀತಾಲಕ್ಷ್ಮಣ ಹನುಮತ್ಸೆವೇತ ಶ್ರೀರಾಮಚಂದ್ರ ದೇವರ ಬ್ರಹ್ಮ ರಥೋತ್ಸವ ನಡೆಯಿತು. ರಥೋತ್ಸವಕ್ಕೆ ಶ್ರೀಪಾದರಾಜ ಮಠದ ಕೇಶವನಿಧಿ ತೀರ್ಥರು ಚಾಲನೆ ನೀಡಿದರು.ಉತ್ಸವದ ಅಂಗವಾಗಿ ನೇವೇದ್ಯ ಮೂಲದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಹೋಮದಿಗಳು, ಶ್ರೀರಾಮದೇವರಿಗೆ ಕಲ್ಯಾಣೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಿತು. ನೂರಾರು ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು. ದೇವಾಲಯದ ವ್ಯವಸ್ಥಾಪಕ ಶೇಷಗಿರಿ ಅಚಾರ್. ವ್ಯಾಸರಾವ್, ಧನಂಜೇಯ, ಮುರಳಿ,ಜಯತೀರ್ಥ, ಸುಬ್ಬರಾಯಶೆಟ್ಟಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry