ಗದಗ: ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ಮಂಗಳವಾರ ಮಾಜಿ ಸಚಿವ ಶ್ರೀರಾಮುಲು `ಉತ್ತರಕ್ಕಾಗಿ ಉಪವಾಸ~ ಸತ್ಯಾಗ್ರಹ ಆರಂಭಿಸಿದರು. ಕಾರ್ಯಕ್ರಮದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಶ್ರೀರಾಮುಲುಗೆ ಬೆಂಬಲ ಸೂಚಿಸಿದರು.

ಕೇವಲ ಎರಡು ದಿನದ ಉಪವಾಸದೊಂದಿಗೆ ಈ ಹೋರಾಟ ಮುಗಿಯುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ಹೆಚ್ಚು ಗಮನ ಕೊಡುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಇದೇ ಸಂದರ್ಭದಲ್ಲಿ ಶ್ರೀರಾಮುಲು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಬಡವರು -ಶ್ರಮಿಕರು- ರೈತರ ಮೊಗದಲ್ಲಿ ನಗೆ ಮೂಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಆಗದೆ ಇದು ಸಾಧ್ಯವಿಲ್ಲ ಎಂದು ಗೊತ್ತಿದೆ. ಆದ್ದರಿಂದ ಮೂಲ ಸಮಸ್ಯೆಯನ್ನೇ ಎತ್ತಿಕೊಂಡು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವುದಾಗಿ ತಿಳಿಸಿದ ಶ್ರೀರಾಮುಲು, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರತ್ಯೇಕ ರಾಜ್ಯ ಸ್ಥಾಪನೆಯ ಕೂಗು ಭುಗಿಲೇಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಬಲವಾಗಿ ಆಗ್ರಹಿಸಿದರು.

ಎರಡು ದಿನಗಳ ಈ ಉಪವಾಸ ಸತ್ಯಾಗ್ರಹ ತಮ್ಮ ರಾಜಕೀಯ ಲಾಭಕ್ಕಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ. ಈ ಭಾಗದ ಜನರ ಏಳಿಗೆಗಾಗಿ ಈ ಹೋರಾಟವೇ ಹೊರತು ಈ ಮೂಲಕ ರಾಜಕೀಯ ನೆಲೆ ಕಂಡುಕೊಳ್ಳುವ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ಸರ್ಕಾರಕ್ಕೆ ಕೇಳಿರುವ 108 ಪ್ರಶ್ನೆಗಳ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು. ಮಧ್ಯಾಹ್ನದ ನಂತರ ಶ್ರೀರಾಮುಲು ಸ್ವಲ್ಪ ಸುಸ್ತಾದವರಂತೆ ಕಂಡು ಬಂದರು. ಡಾ.ಬಸರಿಗಿಡದ ಅವರು ಆರೋಗ್ಯ ತಪಾಸಣೆ ಮಾಡಿ, ದೇಹದಲ್ಲಿ ಸಕ್ಕರೆ ಅಂಶ ಸ್ವಲ್ಪ ಕಡಿಮೆಗೊಂಡಿರುವುದಿಂದ ಸುಸ್ತಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಹಲವಾರು ಮಠಾಧೀಶರು ಉಪವಾಸಕ್ಕೆ ಬೆಂಬಲ ಸೂಚಿಸಿದರು. ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ತಮ್ಮ ಗಾಯನದ ಮೂಲಕ ಉಪವಾಸ ಸತ್ಯಾಗ್ರಹಕ್ಕೊಂದು ಅರ್ಥ ಕಲ್ಪಿಸಿಕೊಟ್ಟಿದ್ದರು. ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಾಪುರ ಮುಂತಾದ ಕಡೆಯಿಂದ ನೂರಾರು ಬಸ್ಗಳಲ್ಲಿ ಜನರು ಆಗಮಿಸಿದ್ದರು.

ಶಾಸಕರಾದ ಸೋಮಶೇಖರ ರೆಡ್ಡಿ, ಸುರೇಶಬಾಬು, ಸಂಸದರಾದ ಸಣ್ಣ ಫಕೀರಪ್ಪ, ಜೆ. ಶಾಂತಾ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಚಿತ್ರನಟಿ ರಕ್ಷಿತಾ, ಡಾ.ಮಹಿಪಾಲ, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ, ಬರಹಗಾರ ಮೋಹನ ನಾಗಮ್ಮನವರ, ಅಲೆಮಾರಿ ಬುಡಕಟ್ಟು ಜನಾಂಗದ ರಾಜ್ಯ ಘಟಕದ ಅಧ್ಯಕ್ಷ ಡಾ. ಬಾಲಗುರುಮೂರ್ತಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಶಿರಹಟ್ಟಿ ಮಠದ ಫಕೀರ ಸಿದ್ಧರಾಮ ಸ್ವಾಮೀಜಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.