ಮೀರ್ಪುರ, ಬಾಂಗ್ಲಾದೇಶ (ಪಿಟಿಐ): ಸತತ ಮೂರು ಗೆಲುವುಗಳೊಂದಿಗೆ ಫೈನಲ್ ಪ್ರವೇಶಿಸಿರುವ ಶ್ರೀಲಂಕಾ ತಂಡದವರು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶ ವಿರುದ್ಧ ಪೈಪೋಟಿ ನಡೆಸಲಿದೆ.

ನಾಲ್ಕು ಬಾರಿಯ ಚಾಂಪಿಯನ್ನರು ಈಗಾಗಲೇ ಪಾಕಿಸ್ತಾನ, ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳನ್ನು ಮಣಿಸಿದ್ದಾರೆ. ಏಂಜೆಲೊ ಮ್ಯಾಥ್ಯೂಸ್ ಬಳಗ ಶನಿವಾರ ನಡೆಯಲಿರುವ ಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಆದ್ದರಿಂದ ಬಾಂಗ್ಲಾ ವಿರುದ್ಧ ಇಂದು ನಡೆಯಲಿರುವ ಪಂದ್ಯ ಲಂಕಾ ತಂಡಕ್ಕೆ ಒಂದು ರೀತಿಯಲ್ಲಿ ‘ಅಭ್ಯಾಸ ಪಂದ್ಯ’ ಎನಿಸಿದೆ. ಫೈನಲ್ಗೆ ಸಜ್ಜಾಗಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ.

ಮತ್ತೊಂದೆಡೆ ಆತಿಥೇಯ ಬಾಂಗ್ಲಾ ತಂಡ ಈ ಪಂದ್ಯದಲ್ಲಿ ಗೆಲುವು ಪಡೆದು ಘನತೆಯನ್ನು ಕಾಪಾಡಿಕೊಳ್ಳುವ ಲೆಕ್ಕಾಚಾರ ಹೊಂದಿದೆ. ಮುಶ್ಫಿಕರ್ ರಹೀಮ್ ಬಳಗ ಆಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆಫ್ಘನ್ ತಂಡದ ಎದುರೂ ಬಾಂಗ್ಲಾ ಮುಗ್ಗರಿಸಿತ್ತು.

ಲಂಕಾ ತಂಡದ ಬ್ಯಾಟ್ಸ್ಮನ್ಗಳು ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ಅನುಭವಿ ಆಟಗಾರ ಕುಮಾರ ಸಂಗಕ್ಕಾರ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಮೂರು ಪಂದ್ಯಗಳಲ್ಲಿ ಅವರು ಕ್ರಮವಾಗಿ 67, 103 ಮತ್ತು 76 ರನ್ ಗಳಿಸಿದ್ದಾರೆ. ಲಾಹಿರು ತಿರಿಮಾನೆ, ಕುಸಾಲ್ ಪೆರೇರಾ ಮತ್ತು ಏಂಜೆಲೊ ಮ್ಯಾಥ್ಯೂಸ್ ಕೂಡಾ ಬ್ಯಾಟಿಂಗ್ ವಿಭಾಗದ ಬಲ ಎನಿಸಿಕೊಂಡಿದ್ದಾರೆ.

ಪಂದ್ಯದ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.