ಮಂಗಳವಾರ, ಮೇ 24, 2022
30 °C

ಸಂಕಟ ನೋಡಿ ಸಂತಸ ಪಡೆಯುವುದು ಅಧರ್ಮ

ಪ್ರೊ. ಮುಮ್ತಾ್ ಅಲಿ ಖಾನ್, ಬೆಂಗಳೂರು Updated:

ಅಕ್ಷರ ಗಾತ್ರ : | |

ರಾಜಕೀಯ ಸಂಸ್ಕೃತಿ ಎಂದರೆ ಕೇವಲ ಮಾನವೀಯತೆಯ ವಿರುದ್ಧ ನಡೆಯುವುದೇ? ಒಂದು ವೇಳೆ ರಾಜಕೀಯ ವ್ಯಕ್ತಿ ಸಂಕಟದಲ್ಲಿ ಸಿಕ್ಕಿ ಬಿದ್ದಾಗ, ಮಾನವೀಯತೆಯನ್ನು ತ್ಯಜಿಸಿ ಸಂತೋಷ ಪಡುವುದು, ಕುಣಿದಾಡುವುದು, ಲಾಡು ಹಂಚುವುದು ಸರಿಯೇ?

ಪ್ರವಾದಿ ಮಹ್ಮದ್‌ರವರು ಮಾನವ ಕೋಟಿಗೆ ಒಂದು ಸಂದೇಶ ಕೊಟ್ಟಿದ್ದಾರೆ.  `ನಿಮ್ಮ ಸಹೋದರನ ಸಂಕಟಕಾಲದಲ್ಲಿ ಸಂತೋಷ ಪಡಬೇಡಿ. ದೇವರು ಇದನ್ನು ಒಪ್ಪುವುದಿಲ್ಲ. ದೇವರು ಸಂಕಟದಲ್ಲಿರುವ ವ್ಯಕ್ತಿಗೆ ಅನುಕಂಪ ತೋರಿಸಬಹುದು ಮತ್ತು ನಿಮ್ಮನ್ನು ಸಂಕಟದಲ್ಲಿ ಸಿಕ್ಕಿಸಬಹುದು.~ ಈ ಸಂದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕು.ಮದರ್ ತೆರೇಸಾರವರು ಒಂದು ಮಾತು ಹೇಳಿದ್ದಾರೆ,  `ನೀವು ನಿಮ್ಮ ಸಹೋದರನ ಸಂತೋಷದಲ್ಲಿ ಭಾಗಿಯಾದರೆ ಅವರ ಸಂತೋಷ ಇನ್ನೂ ಹೆಚ್ಚಾಗುವುದು. ಹಾಗೆಯೇ ಅವರ ಕಷ್ಟದಲ್ಲಿ ಭಾಗಿಯಾದರೆ ಅವರ ನೋವಿನಲ್ಲೂ ಭಾಗಿಯಾದರೆ, ಅವರ ಕಷ್ಟ ಮತ್ತು ನೋವು ಕಮ್ಮಿಯಾಗುವುದು.~ಹಿಂದು ಧರ್ಮ ಶಾಸ್ತ್ರಗಳಲ್ಲೂ ಈ ಮಾತು ಕಂಡು ಬರುವುದು. ಮಾನವೀಯತೆಗೆ ಮಾನ್ಯತೆ ಸಿಗುವುದು.ಇಂದಿನ ನಮ್ಮ ರಾಜಕಾರಣಿಗಳು ಈ ಧರ್ಮಶಾಸ್ತ್ರಗಳ ಕಡೆ ಗಮನ ಕೊಡಬೇಕು. ಅಧಿಕಾರದ ಗರ್ವ, ದರ್ಪ ಅವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ತಮ್ಮ ವಿರೋಧಿಗಳ ಕಷ್ಟ, ನೋವು ತಮಗೂ ಒಂದು ದಿವಸ ಬರಬಹುದೆಂಬ ಭೀತಿ ಹೃದಯದಲ್ಲಿ ನಾಟಿರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.