ಮಂಗಳವಾರ, ಮೇ 11, 2021
24 °C

ಸಂಕಷ್ಟದಲ್ಲಿ ನೆಟ್ಟು ಕಡಿವವ

ಎಸ್. ಕೆ. ನವಲಹಳ್ಳಿ Updated:

ಅಕ್ಷರ ಗಾತ್ರ : | |

ಈತ ಬೆಳಿಗ್ಗೆ ಸೂರ್ಯ ಮೂಡುವ ಮುನ್ನವೇ ಹೆಗಲ ಮೇಲೆ ಗುದ್ದಲಿ ಹೊತ್ತು ಕಾಲ್ನಡಿಗೆ ಹಾಕುತ್ತಾ ಹೊಲದತ್ತ ಹೆಜ್ಜೆ ಹಾಕುವವ. ಕೈಯಲ್ಲಿ ಕುಡಿಯುವ ನೀರಿನ ತತ್ರಾಣಿ, ಕೊರಳಲ್ಲಿ ಟವೆಲ್ ಈತನ ಗುರುತು. ಇತರರ ಜಮೀನಿನಲ್ಲಿ ಬಿತ್ತಿದ ಬೆಳೆಗಳ ಬೆಳವಣಿಗೆಗೆ ಅಡ್ಡಿಯಾಗುವ ಕಸ, ಕರ್ಕಿಯನ್ನು ಬುಡ ಸಮೇತ ಕೀಳುವ ಕೆಲಸದಲ್ಲಿ ಈತ ನಿರತ.ಇವನೇ ನೆಟ್ಟು ಕಡಿಯುವವ. ರೈತರಿಗೆ ನಂಬಿಕೆಯ ವ್ಯಕ್ತಿ ಈತ. ಆದರೆ ಈಚಿನ ದಿನಗಳಲ್ಲಿ  ಮಾತ್ರ ನೆಟ್ಟು ಕಡಿಯುವವರು ಬೆರಳೆಣಿಕೆ ಜನ. ಅಲ್ಲಲ್ಲಿ ಹಳ್ಳಿಗಳಲ್ಲಿ ಮಾತ್ರ ಕಾಣಸಿಗುತ್ತಾರೆ.ಏನಿದು ನೆಟ್ಟು?

ಬೇಸಿಗೆ ಬಂತೆಂದರೆ ಈ ನೆಟ್ಟು ಕಡಿಯುವ ಜನರು ಕಂಡು ಬರುತ್ತಾರೆ. ಸಾಮಾನ್ಯವಾಗಿ ಕಪ್ಪು ಮಣ್ಣು (ಕರಿ ಮಣ್ಣು) ಇರುವ ಹೊಲದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿ ಬೆಳೆದಿರುವ ಕರ್ಕಿಯನ್ನು ಕಿತ್ತು ಹಾಕುವುದು ಇವರ ಕಾಯಕ. ಉತ್ತರ ಕರ್ನಾಟಕ ಮತ್ತು ಬೆಳಗಾವಿ ಪ್ರದೇಶದಲ್ಲಿ ಇವರು ಹೆಚ್ಚು ಕಂಡುಬರುತ್ತಾರೆ.ಹೊಲದಲ್ಲಿ ಬಿತ್ತನೆ ಮಾಡಿದಾಗ ಅದರ ಜೊತೆ ಕರ್ಕಿ ಅಥವಾ ಕಸ ಬೆಳೆದಿರುತ್ತದೆ. ಅದರಿಂದ ಆ ಬೆಳೆಯ ಬೆಳವಣಿಗೆ ಇರುವುದಿಲ್ಲ. ಅದನ್ನು ಕಿತ್ತು ಹಾಕಲು ನೇಮಕಗೊಳ್ಳುವವರೇ ಈ ನೆಟ್ಟು ಕಡಿಯುವವರು. ವರ್ಷದಲ್ಲಿ 2-3 ತಿಂಗಳ ಮಾತ್ರ ಇವರಿಗೆ ಬೇಡಿಕೆ ಹೆಚ್ಚು.ಕೂಲಿ ರೂಪದಲ್ಲಿ ಇವರಿಗೆ ಹಣ. ಕರ್ಕಿ ಹುಲ್ಲು ಬೆಳೆದ ಜಾಗವನ್ನು ಅಳತೆ ಮಾಡುತ್ತಾರೆ. ತಾವು ಕಿತ್ತಿರುವ ಹುಲ್ಲಿನ ಜಾಗದ ಅಳತೆ ಮಾಡಿ ಕೂಲಿ ಪಡೆಯುತ್ತಾರೆ. 1 ಅಡಿ ಆಳ ನೆಟ್ಟು ಕಡಿದರೆ 130ರೂಪಾಯಿ ಪಡೆಯುತ್ತಾರೆ. ಒಂದು ಮೊಳದ ಜಾಗಕ್ಕೆ 25 ರೂಪಾಯಿ ಲೆಕ್ಕದಲ್ಲಿ ಸಹ ಕೂಲಿ ಪಡೆಯುತ್ತಾರೆ ಇವರು. `ಒಂದು ದಿನಕ್ಕೆ ಸುಮಾರು 4 ಅಡಿ ನೆಟ್ಟು ಕಡಿಯುತ್ತೇವೆ. ಆದರೆ ಇಷ್ಟು ಕಡಿಮೆ ಕೂಲಿ ತಮ್ಮ ಸಂಸಾರದ ನೊಗ ಸಾಗಿಸಲು ಸಾಲುವುದಿಲ್ಲ' ಎನ್ನುತ್ತಾರೆ ನಂದಾಪೂರ ಗ್ರಾಮದ ರೈತ ಕರಿಯಪ್ಪ ಜರಗಡ್ಡಿ .ನೆಟ್ಟು ಕಡಿಯುವುದು ಏಕೆ

ಕಪ್ಪು ಮಣ್ಣಿನ ಗುಣಹೊಂದಿರುವ ಭೂಮಿಯಲ್ಲಿ ಹಲವು ಬಾರಿ ಬೆಳೆ ಕಡಿಮೆ ಬರುತ್ತದೆ. ಇದರ ಕಾರಣ ಅಲ್ಲಿ ಕರ್ಕಿ ಹುಲ್ಲು ಯಥೇಚ್ಛವಾಗಿ ಬೆಳೆಯುವುದು. ಇದು ಹೆಚ್ಚಾಗಿ ಬೇಸಿಗೆಯಲ್ಲಿ ಕಂಡುಬರುವ ಸಮಸ್ಯೆ. ಈ ಕಾರಣದಿಂದ ರೈತರು ಹುಲ್ಲನ್ನು ಬುಡ ಸಮೇತ ತೆಗೆದು ಹಾಕಲೇಬೇಕು. ಇದರಿಂದ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯ.ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಇಷ್ಟೊಂದು ಕಷ್ಟ ಪಡದೆ ಟ್ರ್ಯಾಕ್ಟರ್ ಮೂಲಕ ರಂಟೆ -ಕುಂಟೆ ಹೊಡೆಯುವುದು ರೂಢಿ ಮಾಡಿಕೊಂಡಿದ್ದಾರೆ. ಕೈಯಲ್ಲಿ ಮಾಡಿದಷ್ಟು ಕೆಲಸವನ್ನು ಉತ್ತಮವಾಗಿ ಯಂತ್ರಗಳು ಮಾಡದೇ ಹೋದರೂ ಎಲ್ಲವೂ ಯಂತ್ರಗಳ ಪಾಲೇ ಆಗಿವೆ. ಆದ್ದರಿಂದ ನೆಟ್ಟು ಕಡಿಯುವವರನ್ನು ಕೇಳುವವರೇ ಇಲ್ಲ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.