ಮಂಗಳವಾರ, ಜನವರಿ 26, 2021
28 °C

ಸಂಕ್ಷಿಪ್ತ ಚಿತ್ರ ವಾರ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರದಲ್ಲಿ ‘ಕಿರಾತಕ’

ಸರವಣ ಮೂರ್ತಿ ನಿರ್ಮಿಸುತ್ತಿರುವ ‘ಕಿರಾತಕ’ ಚಿತ್ರದ ಚಿತ್ರೀಕರಣ ಪಾಂಡವಪುರದಲ್ಲಿ ನಡೆಯುತ್ತಿದೆ. ಅಲ್ಲಿ ಯಶ್, ತಾರಾ ಅಭಿನಯಿಸಿದ ಹಲವು ದೃಶ್ಯಗಳ ಚಿತ್ರೀಕರಣವಾದವು. ಚಿತ್ರದ ಚಿತ್ರಕಥೆ, ನಿರ್ದೇಶನ, ಪ್ರದೀಪ್ ರಾಜ್, ಛಾಯಾಗ್ರಹಣ ಆರ್ ಸೆಲ್ವಾ, ಸಂಭಾಷಣೆ ಬಿ.ಎ.ಮಧು, ಸಂಗೀತ ವಿ. ಮನೋಹರ್, ಸಂಕಲನ ಪಳನಿವೇಲು, ಕಲೆ ಹೊಸ್ಮನೆ ಮೂರ್ತಿ. ಎರಡು ಹಳ್ಳಿಗಳ ನಡುವೆ ನಡೆಯುವ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಯಶ್, ಓವಿಯಾ, ತಾರಾ, ನಾಗಾಭರಣ, ಸಂಕೇತ್ ಕಾಶಿ ಮುಂತಾದವರು ಅಭಿನಯಿಸುತ್ತಿದ್ದಾರೆ.

‘ವೀರಬಾಹು’ ಚಿತ್ರೀಕರಣ ಪೂರ್ಣ

‘ಕರಿಯ ನೀ ಕರೆಯೋದು ಹೆಚ್ಚ ನಿನ್ನ ಹಿಂದೆ ನಾ ಬರೋದು ಹೆಚ್ಚ’ ಎಂಬ ಗೀತೆಗೆ ಮುರಳಿ ನೃತ್ಯ ನಿರ್ದೇಶನದಲ್ಲಿ ವಿಜಯ್ ಹಾಗೂ ನಿಧಿ ಸುಬ್ಬಯ್ಯ ಹೆಜ್ಜೆ ಹಾಕಿದರು. ನಾಗೇಂದ್ರ ಪ್ರಸಾದ್ ರಚಿಸಿರುವ ‘ರಿಂಗಾ ರಿಂಗಾ ರೋಜಾ ಕೊಡ್ಲಾ ಒಂದು ರೋಜಾ’ ಎಂಬ ಗೀತೆಯ ಚಿತ್ರೀಕರಣದಲ್ಲಿ ವಿಜಯ್, ನಿಧಿ ಸುಬ್ಬಯ್ಯ, ಎಂ.ಎಸ್.ಉಮೇಶ್ ಹಾಗೂ ನಲವತ್ತಕ್ಕೂ ಹೆಚ್ಚು ಪುಟಾಣಿ ಮಕ್ಕಳು ಭಾಗವಹಿಸಿದ್ದರು.  ಈ ಎರಡು ಹಾಡುಗಳ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ.  ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸುತ್ತಿದ್ದಾರೆ.  ತಾರಾಬಳಗದಲ್ಲಿ ವಿಜಯ್, ನಿಧಿ ಸುಬ್ಬಯ್ಯ, ರಂಗಾಯಣ ರಘು, ರಾಜು ತಾಳಿಕೋಟೆ, ಅವಿನಾಶ್, ಎಂ.ಎನ್.ಲಕ್ಷ್ಮಿದೇವಿ ಮುಂತಾದವರು ನಟಿಸಿದ್ದಾರೆ.

ಧರ್ಮಗಿರಿಯಲ್ಲಿ ‘ಸಿದ್ಲಿಂಗು’

ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ ‘ಸಿದ್ಲಿಂಗು’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರಿಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಯೋಗೀಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ರಮ್ಯಾ. ರಂಗಾಯಣರಘು, ಅಚ್ಯುತಕುಮಾರ್ ಸೇರಿದಂತೆ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಇದ್ದಾರೆ.

‘ರೋಹಿಣಿ ನಕ್ಷತ್ರ, ವೃಷಭ ರಾಶಿ’ ಎಂಬ ಅಡಿಬರಹದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ದೇಶಕರು ವಿಜಯಪ್ರಸಾದ್. ‘ಸಿಲ್ಲಿಲಲ್ಲಿ’, ‘ಪಾಪಪಾಂಡು’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕರಿಗೆ ಹಿರಿತೆರೆಯಲ್ಲಿ ಇದು ಚೊಚ್ಚಲ ಚಿತ್ರ. ಡಿಸೆಂಬರ್‌ನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಅನೂಪ್ ಸೀಳಿನ್ ಸಂಗೀತ, ಸುಜ್ಞಾನ್ ಛಾಯಾಗ್ರಹಣ, ಉದಯರವಿ ಹೆಗಡೆ ಸಂಕಲನ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.