ಮಂಗಳವಾರ, ಮೇ 17, 2022
23 °C

ಸಂಕ್ಷಿಪ್ತ ವಿದೇಶಿ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜಿಪ್ಟ್ ಅಧ್ಯಕ್ಷ ಮೊಹಮದ್?

ಕೈರೊ (ಐಎಎನ್‌ಎಸ್):
ಈಜಿಪ್ಟ್ ಅಧ್ಯಕ್ಷ ಚುನಾವಣೆಯ ಮತ ಎಣಿಕೆ ಸಂಪೂರ್ಣವಾಗಿದ್ದು, ಮುಸ್ಲಿಂ ಬ್ರದರ್‌ಹುಡ್ ಅಭ್ಯರ್ಥಿ ಮೊಹಮದ್ ಮುರ್ಸಿ ಶೇಕಡಾ 52ರಷ್ಟು ಮತ ಪಡೆದು ವಿಜೇತರಾಗಿದ್ದಾರೆ ಎಂದು ಅವರ ಪಕ್ಷದ ಪ್ರಚಾರ ಕಚೇರಿಯ ಮೂಲಗಳು ತಿಳಿಸಿವೆ.ವಿರೋಧಿ ಅಭ್ಯರ್ಥಿ ಮಾಜಿ ಪ್ರಧಾನಿ ಅಹಮದ್ ಶಫೀಕ್ ಶೇಕಡಾ 48ರಷ್ಟು ಮತಗಳನ್ನು ಪಡೆದಿದ್ದಾರೆ.

 ಮೊಹಮದ್ ಮುರ್ಸಿ ಅವರ ಆಯ್ಕೆಯನ್ನು ಚುನವಣೆ ಆಯೋಗ ಅಧಿಕೃತವಾಗಿ ಘೋಷಿಸಬೇಕಿದ್ದು, ಮುರ್ಸಿ ಅವರು ಸೇನಾ ಬೆಂಬಲವಿಲ್ಲದೆ ಆಯ್ಕೆಯಾದ ಪ್ರಥಮ ಚುನಾಯಿತ ಅಧ್ಯಕ್ಷರಾಗಲಿದ್ದಾರೆ.ಆದರೆ ಈಗ ಆಡಳಿತ ನಡೆಸುತ್ತಿರುವ ಸೇನಾ ಮುಖ್ಯಸ್ಥರು ಮಧ್ಯಂತರ ಸಂವಿಧಾನ ನಿಯಮಗಳನ್ನು ಬಿಡುಗಡೆ ಮಾಡಿ ಅಡಳಿತದ ಮೇಲೆ ನಿಯಂತ್ರಣ ಸಾಧಿಸುವ ಹುನ್ನಾರ ನಡೆಸಿದ್ದಾರೆ.ಬಾಂಬ್ ದಾಳಿ- 34 ಜನ ಬಲಿ

ಅಬುಜಾ (ಪಿಟಿಐ):
ಉತ್ತರ ನೈಜೀರಿಯಾದಲ್ಲಿ ಚರ್ಚ್‌ಗಳನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಸೋಮವಾರ ನಡೆಸಿದ ಸರಣಿ ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ 34 ನಾಗರಿಕರು ಮೃತಪಟ್ಟಿದ್ದಾರೆ.  90ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.ಆತ್ಮಾಹುತಿ ಬಾಂಬರ್‌ಗಳು ನಾಲ್ಕು ಚರ್ಚ್‌ಗಳನ್ನು ಗುರಿಯಾಗಿಸಿಕೊಂಡು ಈ ಸರಣಿ ದಾಳಿಯನ್ನು ಸಂಘಟಿಸಿದ್ದಾರೆ. ದಾಳಿಗೆ ಪ್ರತಿಯಾಗಿ ಉದ್ರಿಕ್ತ ಕ್ರೈಸ್ತ ಯುವಕರು ಸ್ಥಳೀಯ ಮುಸ್ಲಿಮರ ವಿರುದ್ಧ ದಾಳಿ ನಡೆಸಿದರು.ಕಡುನಾ  ಮತ್ತು ಝಾರಿಯಾ ನಗರಗಳಲ್ಲಿರುವ ತಲಾ ಎರಡು ಚರ್ಚ್‌ಗಳ ಮೇಲೆ ಈ ದಾಳಿ ನಡೆದಿದೆ.ಭಾರತೀಯ ಚಾಲಕನ ಮೇಲೆ ಹಲ್ಲೆ

ಮೆಲ್ಬರ್ನ್ (ಪಿಟಿಐ):
ಭಾರತೀಯ ಮೂಲದ ಟ್ಯಾಕ್ಸಿ ಚಾಲಕರೊಬ್ಬರ ಮೇಲೆ ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದ ಹೊರ ವಲಯದಲ್ಲಿ ಭಾನುವಾರ ರಾತ್ರಿ ದಾಳಿ ನಡೆದಿದೆ.ಯುವಕರ ತಂಡವೊಂದು ಈ ಕೃತ್ಯ ಎಸಗಿದ್ದು, ಭಾರತೀಯ ಚಾಲಕನನ್ನು ಜನಾಂಗೀಯವಾಗಿ ನಿಂದಿಸಿದೆ. ಅಲ್ಲದೇ ಟ್ಯಾಕ್ಸಿಯನ್ನು ಧ್ವಂಸ ಮಾಡಿದೆ.`ಸೆನ್ಸಾರ್: ಭಾರತದಿಂದ ಮನವಿ~

ನ್ಯೂಯಾರ್ಕ್ (ಪಿಟಿಐ):
ಇಂಟರ್‌ನೆಟ್‌ನಲ್ಲಿ ಹಾಕಲಾಗಿರುವ ನಿರ್ದಿಷ್ಟ ಮಾಹಿತಿ/ ವಿಷಯಗಳನ್ನು ತೆಗೆದು ಹಾಕುವಂತೆ ಕೋರಿ ಭಾರತದಿಂದ ಒಟ್ಟು 255 ಮನವಿಗಳು ಬಂದಿವೆ ಎಂದು ಇಂಟರ್‌ನೆಟ್ ದೈತ್ಯ ಗೂಗಲ್ ಹೇಳಿದೆ.ಕಳೆದ ವರ್ಷದ ದ್ವಿತೀಯಾರ್ಧ ಅವಧಿಯಲ್ಲಿ ಈ ಪ್ರಮಾಣದಲ್ಲಿ ಶೇ 49ರಷ್ಟು ಏರಿಕೆಯಾಗಿದೆ ಎಂದೂ ಅದು ಹೇಳಿದೆ.ಪ್ರೀತಿ ಮಾತಿಗೆ ಲಕ್ಷ ತೆತ್ತ ಅಪ್ಪ!

ಲಂಡನ್ (ಐಎಎನ್‌ಎಸ್):
ಕೇವಲ 12 ವರ್ಷದ ಮಗನ ಪ್ರೀತಿ ಮಾತಿನಿಂದ ಅಪ್ಪನ ಜೇಬಿಗೆ ಬಲವಾಗಿ ಕತ್ತರಿ ಬಿದ್ದಿದೆ!ಆಸ್ಕರ್ ರುಶೆನ್ ತನ್ನ ತಂದೆ ಡೆನ್ನಿಸ್ ರುಶೆನ್ (65) ಮೊಬೈಲ್ ಬಳಸಿ 13 ವರ್ಷದ ಪ್ರೇಯಸಿಗೆ ಪ್ರತಿನಿತ್ಯ ಫೋನಾಯಿಸಿದ ಪರಿಣಾಮ ಒಂದೇ ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಣ ಪಾವತಿಸಬೇಕಾಗಿದೆ.

`ಪ್ರತಿ ತಿಂಗಳು 10.50 ಪೌಂಡ್‌ನಷ್ಟು ಹಣ ಪಾವತಿಸುತ್ತಿದ್ದ ನನಗೆ ಏಕಾಏಕಿ 1700 ಪೌಂಡ್‌ನಷ್ಟು (ರೂ 1,50,000) ಮೊಬೈಲ್ ಬಿಲ್ ಬಂದಿದೆ ಎಂದು ಡೆನ್ನಿಸ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.