ಮೋದಿ, ರಾಜ್ನಾಥ್ಗೆ ಸುಧೀಂದ್ರ ಟೀಕೆ
ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರಂಕುಶವಾದಿ ಮತ್ತು ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಕಪಟಿ ಎಂದು ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಆಪ್ತ ಸುಧೀಂದ್ರ ಕುಲಕರ್ಣಿ ಬಣ್ಣಿಸಿದ್ದಾರೆ. `ಮೋದಿ ಅವರು ಪಕ್ಷಕ್ಕಾಗಿ ಇಬ್ಬಗೆಯ ಬೊಬ್ಬೆಯಿಡುವ ಸ್ವೇಚ್ಛಾವರ್ತಿಯಾಗಿದ್ದು, ಸಿಂಗ್ ಜ್ಯೋತಿಷವನ್ನು ನಂಬಿ ಪ್ರಧಾನಿಯಾಗುವ ಕನಸಿನಲ್ಲಿದ್ದಾರೆ' ಎಂದು ರೆಡಿಫ್.ಕಾಮ್ನಲ್ಲಿ ಬರೆದ ಲೇಖನದಲ್ಲಿ ಕುಲಕರ್ಣಿ ಟೀಕಿಸಿದ್ದಾರೆ.

ಯಾತ್ರೆಗೆ ಉಗ್ರರ ದಾಳಿ ಬೆದರಿಕೆ
ಶ್ರೀನಗರ/ನವದೆಹಲಿ (ಪಿಟಿಐ): ಯಾತ್ರಿಗಳು ಸುಮಾರು ಎರಡು ತಿಂಗಳವರೆಗೆ ಕ್ರಮಿಸಬೇಕಾದ ಅಮರನಾಥ ಯಾತ್ರಾ ಮಾರ್ಗದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಂಭವ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಬುಧವಾರ ಹೇಳಿದೆ. ಈ ಮಾರ್ಗದಲ್ಲಿ ಉಗ್ರರ ದಾಳಿ ಬೆದರಿಕೆ ಇರುವುದಾಗಿ ಕೇಂದ್ರ ಸರ್ಕಾರವೂ ತಿಳಿಸಿದೆ.

ಯಾತ್ರಿಕರಿಗೆ ಭದ್ರತೆ ಒದಗಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಯಾತ್ರಿಗಳ ಸುರಕ್ಷತೆಗಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆಗಳನ್ನು ಕಳುಹಿಸುತ್ತಿದೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.

ಸಂವಿಧಾನದ 21ನೇ ವಿಧಿ ಸರ್ವರ ಹಕ್ಕು
ನವದೆಹಲಿ (ಐಎಎನ್ಎಸ್): `ಜೀವಿಸಲು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸಲು ಸಂವಿಧಾನ ನೀಡಿರುವ ಹಕ್ಕು' ಭಾರತೀಯನಿಗೆ ಮಾತ್ರವಲ್ಲದೆ, ದೇಶದಲ್ಲಿ ನೆಲೆಸಿರುವ ಯಾವುದೇ ವಿದೇಶಿ ಪ್ರಜೆಗೂ ಲಭ್ಯವಿರುತ್ತದೆ ಎಂದು ಸುಪ್ರೀಂಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.

ಮೂವರು ಉಗಾಂಡ ರಾಷ್ಟ್ರೀಯರ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿ, ಪಾಸ್ಪೋರ್ಟ್ ವಶಪಡಿಸಿಕೊಂಡು, ಪ್ರಯಾಣ ನಿರ್ಬಂಧಿಸಿದ ಆದೇಶವನ್ನು ರದ್ದುಪಡಿಸಿ, ಸಂವಿಧಾನದ 21ನೇ ವಿಧಿಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್ ಮತ್ತು ರಂಜನ್ ಗೊಗೋಯ್ ಅವರನ್ನೊಳಗೊಂಡ ನ್ಯಾಯಪೀಠವು, `ಕಾನೂನಿನಲ್ಲಿ ತಿಳಿಸಿರುವ ಕೆಲವು ನಿಯಮಾವಳಿಗಳ ಹೊರತಾಗಿ ಯಾವುದೇ ವ್ಯಕ್ತಿಯಾದರೂ ದೇಶದಲ್ಲಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಅನುಭವಿಸುವ ಹಕ್ಕು ಹೊಂದಿರುತ್ತಾನೆ' ಎಂದು ತಿಳಿಸಿತು.

ಸಿಪಿಎಂ ಹತ್ಯೆ ಸಂಚು: ಮಮತಾ
ಕೋಲ್ಕತ್ತ (ಪಿಟಿಐ, ಐಎಎನ್ಎಸ್): ರಾಜ್ಯದಲ್ಲಿ ಅಧಿಕಾರಕ್ಕೆ ಮರಳಲು ಬಯಸಿರುವ ಸಿಪಿಎಂ, ತಮ್ಮ ಹತ್ಯೆಗಾಗಿ ಮಾವೊವಾದಿಗಳೊಡನೆ ಕೈಜೋಡಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಇಲ್ಲಿ ಆರೋಪಿಸಿದರು.

`ತಮ್ಮನ್ನು ಹತ್ಯೆ ಮಾಡುವ ಕುತಂತ್ರದಲ್ಲಿ ಯಶಸ್ಸು ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಮಾರ್ಕ್ಸ್ವಾದಿಗಳೂ ಸ್ನೇಹ ಬೆಳೆಸಿದ್ದಾರೆ. ಸಿಪಿಎಂ, ಕಾಂಗ್ರೆಸ್ ಹಾಗೂ ಮಾವೊವಾದಿಗಳ ಈ ಸಂಚಿನಲ್ಲಿ ಮಾಧ್ಯಮ ಸಂಸ್ಥೆಯೊಂದರ ಕೈವಾಡವಿದೆ' ಎಂದೂ ಅವರು ಆಪಾದಿಸಿದರು.

ಕಲ್ಲಿದ್ದಲು ಹಗರಣ: 13ನೇ ಎಫ್ಐಆರ್
ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಉಕ್ಕು ಕಂಪೆನಿಯೊಂದರ ವಿರುದ್ಧ ಹೊಸ ಮೊಕದ್ದಮೆ (ಎಫ್ಐಆರ್) ದಾಖಲಿಸಿಕೊಂಡಿರುವ ಸಿಬಿಐ, ಇಲ್ಲಿರುವ ಸಂಸ್ಥೆಯ ಕಟ್ಟಡಗಳ ಮೇಲೆ ಬುಧವಾರ ದಾಳಿ ನಡೆಸಿ ದಾಖಲುಪತ್ರಗಳಿಗಾಗಿ ಶೋಧ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.