ಭಾನುವಾರ, ಜನವರಿ 19, 2020
26 °C

ಸಂಜಯ್‌ ದತ್‌ಗೆ ಮತ್ತೆ ಪೆರೋಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಐಎಎನ್ಎಸ್):ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಮಾನ್ಯತಾ ಅವರನ್ನು ನೋಡಿಕೊಳ್ಳುವ ಸಲುವಾಗಿ ಬಾಲಿವುಡ್ ನಟ ಸಂಜಯ್ ದತ್‌ ಅವರಿಗೆ ಶನಿವಾರ ಮತ್ತೆ ಒಂದು ತಿಂಗಳ ಪೆರೋಲ್ ಮಂಜೂರು ಮಾಡಲಾಗಿದೆ.

ಮುಂಬೈ ಸ್ಫೋಟ ಪ್ರಕರಣ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಜೈಲು ಸೇರಿದ್ದ ದತ್ ಅವರು ಮೂರು ತಿಂಗಳಲ್ಲಿ ಇದು ಎರಡನೇ ಬಾರಿಗೆ ಪೆರೋಲ್ ಪಡೆದಂತಾಗಿದೆ. ಯರವಾಡಾ ಜೈಲಿನಿಂದ ದತ್ ಅವರು ಮುಂಬೈನ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಈ ಮೊದಲು ಅನಾರೋಗ್ಯದ ಕಾರಣಕ್ಕೆ ಪೆರೋಲ್ ನೀಡಿದ್ದು ತೀವ್ರ ವಿವಾದಕ್ಕೆ ಎಡೆಮಾಡಿತ್ತು. ರಾಜಕೀಯ ಪಕ್ಷಗಳ ವಿರೋಧದ ನಡುವೆಯೇ ಇದೀಗ ಮತ್ತೆ ಪೆರೋಲ್ ನೀಡಲಾಗಿದೆ.

 

ಪ್ರತಿಕ್ರಿಯಿಸಿ (+)