ಸೋಮವಾರ, ಮೇ 10, 2021
26 °C

ಸಂಬಾರ ಪದಾರ್ಥಗಳ ರಫ್ತು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಲಕ್ಕಿ, ಲವಂಗ, ಕರಿಮೆಣಸು ಸೇರಿದಂತೆ ಒಟ್ಟಾರೆ 2012-13ನೇ ಸಾಲಿನಲ್ಲಿ 6.99 ಲಕ್ಷ ಟನ್‌ಗಳಷ್ಟು ಸಂಬಾರ ಪದಾರ್ಥಗಳನ್ನು ರಫ್ತು ಮಾಡಲಾಗಿದೆ ಎಂದು ಭಾರತೀಯ ಸಂಬಾರ ಮಂಡಳಿ ಹೇಳಿದೆ.2011-12ನೇ ಸಾಲಿನಲ್ಲಿ ಒಟ್ಟು 5.75 ಲಕ್ಷ ಟನ್‌ಗಳಷ್ಟು ಮಸಾಲೆ ಪದಾರ್ಥ ರಫ್ತಾಗಿತ್ತು. ಈ ಬಾರಿ ಇದು ಶೇ 22ರಷ್ಟು ಹೆಚ್ಚಳವಾಗಿದ್ದು ಒಟ್ಟು ರೂ 11,171 ಕೋಟಿ ವಹಿವಾಟು ನಡೆದಿದೆ ಎಂದು ಮಂಡಳಿ ಹೇಳಿದೆ. 2012-13ನೇ ಸಾಲಿನಲ್ಲಿ ಒಟ್ಟು ್ಙ8,200 ಕೋಟಿ ಮೌಲ್ಯದ 5.66 ಟನ್‌ಗಳಷ್ಟು ಮಸಾಲೆ ಪದಾರ್ಥಗಳನ್ನು ರಫ್ತು ಮಾಡುವ ಗುರಿ ನಿಗದಿಪಡಿಸಿದ್ದೆವು. ತೂಕ ಮತ್ತು ಮೌಲ್ಯ ಎರಡರಲ್ಲೂ  ಈ ಗುರಿ ದಾಟಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.10 ಪಟ್ಟು ಹೆಚ್ಚಳ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಳ್ಳುಳ್ಳಿ ರಫ್ತು 10 ಪಟ್ಟು ಹೆಚ್ಚಳವಾಗಿದೆ. ರೂ 74.49 ಕೋಟಿ ಮೌಲ್ಯದ  24 ಸಾವಿರ ಟನ್‌ಗಳಷ್ಟು ಬೆಳ್ಳುಳ್ಳಿ ರಫ್ತಾಗಿದೆ. 2011-12ನೇ ಸಾಲಿನಲ್ಲಿ ರೂ14.15 ಕೋಟಿ ಮೌಲ್ಯದ 2,200 ಟನ್‌ಗಳಷ್ಟು ಬೆಳ್ಳುಳ್ಳಿ ರಫ್ತು ಮಾಡಲಾಗಿತ್ತು ಎಂದು ಮಂಡಳಿ ಹೇಳಿದೆ.  2.81 ಲಕ್ಷ ಟನ್‌ಗಳಷ್ಟು ಮೆಣಸು ಮತ್ತು 79,900 ಟನ್‌ಗಳಷ್ಟು ಜೀರಿಗೆ ರಫ್ತು ಮಾಡಲಾಗಿದೆ. ಜೀರಿಗೆ ರಫ್ತು ಶೇ 76ರಷ್ಟು ಹೆಚ್ಚಳವಾಗಿದ್ದು ರೂ 1,093 ಕೋಟಿ ವಹಿವಾಟು ನಡೆದಿದೆ.ಏಲಕ್ಕಿ ಮತ್ತು ಕರಿಮೆಣಸು ರಫ್ತು 2012-13ನೇ ಸಾಲಿನಲ್ಲಿ ಕ್ರಮವಾಗಿ ಶೇ 40 ಮತ್ತು ಶೇ 52ರಷ್ಟು ಕುಸಿತ ಕಂಡಿದೆ.   ಸಂಬಾರ ಪದಾರ್ಥಗಳ ಉತ್ಪಾದನೆ, ಬಳಕೆ ಮತ್ತು ರಫ್ತಿನಲ್ಲಿ  ಭಾರತ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.