ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಮಂಜು ನಾಥ ನಗರದಲ್ಲಿ ಶುಕ್ರವಾರ ವರದಾಂಜನೇಯ ದೇವಸ್ಥಾನಲ್ಲಿ ಮಂಜುನಾಥ ದೇವಸ್ಥಾನದ ಸೇವಾ ಸಮಿತಿ ಹಾಗೂ ಸಾರ್ವಜನಿಕರ ಆಶ್ರಯದಲ್ಲಿ ಹನುಮ ಜಯಂತಿ ಕಾರ್ಯಕ್ರಮ ಸಕಲ ವಾದ್ಯ ವೈಭದೊಂದಿಗೆ ಸಂಭ್ರಮದಿಂದ ಜರುಗಿತು.

ಹನುಮ ಜಯಂತಿ ನಿಮಿತ್ತ ನೂರಾರು ಸುಮಂಗಲೆಯರು ಬಾಲ ಹನುಮನ ಮೂರ್ತಿ ಯನ್ನು ತೊಟ್ಟಿಲಲ್ಲಿಟ್ಟು ತೂಗಲಾಯಿತು. ಬೆಳಿಗ್ಗೆ ಹನುಮನ ದೇವದರಿಗೆ ವಿಶೇಷ ಅಭಿಷೇಕ, ಹೋಮ, ಹವನಗಳನ್ನು ನೆರವೇರಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ತೊಟ್ಟಿಲು ಪೂಜೆ ಸಲ್ಲಿಸುವ ಮೂಲಕ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲದೆ ದೇವಸ್ಥಾನಕ್ಕೆ ಬಂದಿರುವ ಭಕ್ತ ಸಮೂಹಕ್ಕೆ ಅನ್ನ ಪ್ರಸಾದ ಸೇವೆಯನ್ನು ನೆರವೇರಿಸಿದರು.

ಮಂಜುನಾಥ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಮಾಲತೇಶ ಗೌಡರ, ದೇವಸ್ಥಾನದ ಅರ್ಚಕರಾದ ಬಸವರಾಜ ಬೆಟಗೇರಿ, ಗಂಗಾಧರ ಗುಡಿಮನಿ, ಶಿಕ್ಷಕ ಎಂ.ಎಫ್. ಗುಡಿಮನಿ, ನ್ಯಾಯಾ ಲಯ ಇಲಾಖೆ ಅಧಿಕಾರಿ ಹನುಮಂತಪ್ಪ ಮುಳ ಗುಂದ, ಶಿವಾನಂದ ಗೌಡರ, ಎಂ.ಎಲ್. ಗುಡಿಮನಿ, ನಾಗರಾಜ ಬೆಟಗೇರಿ, ಶಿವಪುತ್ರಪ್ಪ ಬೆಟಗೇರಿ, ಮಂಜುನಾಥ ಗುಡಿಮನಿ, ಚನ್ನಬಸಮ್ಮಾ ಗುಡಿಮನಿ, ಲಕ್ಷ್ಮವ್ವ ಸ್ವಾದಿ, ನೀಲಮ್ಮಾ ಗೌಡರ, ಉಮಾ ಸ್ವಾದಿ, ರೇಣುಕಾ ಮಿಶ್ರಿಕೋಟಿ, ಕೃಷ್ಣಾ ಬೆಟಗೇರಿ ಮತ್ತಿತರರು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಂಪು ಪಾನೀಯ ವಿತರಣೆ
ಹಿರೇಕೆರೂರ: ಹನುಮ ಜಯಂತಿ ನಿಮಿತ್ತ ಪಟ್ಟಣದ ಸ್ಟೇಟ್ ಬ್ಯಾಂಕ್ ಸಮೀಪ ವರ್ತಕರು ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಿದರು.

ಸುಡು ಬಿಸಿಲಿನಿಂದ ಬಳಲಿದ್ದ ಜನತೆ ತಂಪು ಪಾನೀಯ ಕುಡಿದು ಧನ್ಯತಾ ಭಾವದೊಂದಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

ಈ ಸಂದರ್ಭದಲ್ಲಿ ಡಾ.ಆರ್.ಎಚ್.ಹಳ್ಳೂರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪುಟ್ಟಪ್ಪ ಗೌಡ್ರ, ಶಿವರಾಜ ಮಡಿವಾಳರ, ದೇವೆಂದ್ರಪ್ಪ ಗೊವಿಂದಪ್ಪನವರ, ಸತೀಶ ಭಟ್, ರಾಘವೇಂದ್ರಪ್ಪ ಗೊಂದಪ್ಪ ನವರ, ಗಂಗಾಧರ ಭಟ್, ದತ್ತಾತ್ರೇಯ ರಾಯ್ಕರ, ಡಾ. ರಾಜೇಶಖರ ಹುರಕಡ್ಲಿ, ಬಸವರಾಜ ತಿಪ್ಪಶೆಟ್ಟಿ, ಓಂಕಾರಪ್ಪ ಕುಂಕುಮಗಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.