ಗುರುವಾರ , ಜೂನ್ 17, 2021
29 °C
ಬಣ್ಣದಲ್ಲಿ ಮಿಂದೆದ್ದ ಯುವ ಜನತೆ

ಸಂಭ್ರಮದ ಹೋಳಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ವಯಸ್ಸಿನ ಭೇದ ಭಾವವಿಲ್ಲದೇ ಪಟ್ಟಣದಲ್ಲಿ ಭಾನುವಾರ ಹೋಳಿ ಹಬ್ಬವನ್ನು ನಾಗರಿಕರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂಭ್ರಮದಿಂದ ಆಚರಿಸಿದರು.ಪಟ್ಟಣದ ಮಾಸೂರು ಸರ್ಕಲ್‌, ಹಳಿಯೂರು, ದೊಡ್ಡಕೇರಿ, ಮಂಡಿಪೇಟೆ, ದೊಡ್ಡಪೇಟೆ, ಚನ್ನಕೇಶವನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ಬೆಳಿಗ್ಗೆ ಕಾಮ ದಹನ ನಡೆಸುವ ಮೂಲಕ ಹೋಳಿ ಹಬ್ಬ ಆರಂಭಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾದ್ಯಗಳೊಂದಿಗೆ ನೃತ್ಯ ಮಾಡುತ್ತಾ ಸಾಗಿದ ಯುವಕರ ಗುಂಪು ಪರಸ್ಪರ ಸ್ನೇಹಿತರಿಗೆ ವಿವಿಧ ಬಗೆಯ ಬಣ್ಣ ಹಚ್ಚುವ ಮೂಲಕ ಸಂಭ್ರಮದಲ್ಲಿ ಮಿಂದರು.ಕೆಲವು ಬಡಾವಣೆಗಳಲ್ಲಿ ಮಹಿಳೆಯರು, ಯುವತಿಯರು ಹಾಗೂ ಪುಟಾಣಿ ಮಕ್ಕಳು ಹಿರಿಯರು ಕಿರಿಯರು ಎಂಬ ವಯಸ್ಸಿನ ಅಂತರವಿಲ್ಲದೆ ಹೋಳಿ ಹಬ್ಬದಲ್ಲಿ ಪಾಲ್ಗೊಂಡ ದೃಶ್ಯ ಕಂಡು ಬಂದಿತು.ಹೋಳಿ ಸಂಭ್ರಮ

ರಿಪ್ಪನ್‌ಪೇಟೆ:
ಪಟ್ಟಣದಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.ಶನಿವಾರ ರಾತ್ರಿ ವಿನಾಯಕ ವೃತ್ತದಲ್ಲಿ ಕಾಮಣ್ಣನನ್ನು ಸುಡುವ ಮೂಲಕ ಹೋಳಿ ಹುಣ್ಣಿಮೆಗೆ ಚಾಲನೆ ನೀಡಲಾಯಿತು.ಶಬರೀಶ ನಗರ, ವಿನಾಯಕ ನಗರ, ವಿದ್ಯಾನಗರ, ಗಾಂಧಿನಗರ , ತಿಲಕ್‌ ನಗರ, ರಾಮನಗರ ಸೇರಿದಂತೆ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಹೋಳಿ ಆಚರಣೆಯಲ್ಲಿ ಚಿಣ್ಣರು, ಹಿರಿಯರು, ಯುವಕರು ಪರಸ್ಪರ ಬಣ್ಣಗಳ ಎರಚಾಟದಲ್ಲಿ ತೊಡಗಿದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು. ಪ್ರಜಾವಾಣಿ ವಾರ್ತೆಶಾಂತಿಯುತವಾಗಿ ನಡೆದ ಹೋಳಿ ಬಣ್ಣದ ಎರಚಾಟ ಮಧ್ಯಾಹ್ನ 12ಕ್ಕೆ ಮುಕ್ತಾಯಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.