ಮಂಗಳವಾರ, ಜನವರಿ 28, 2020
18 °C

ಸಂವಿಧಾನ ತಿದ್ದುಪಡಿ: ಐಒಸಿ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನಿಷೇಧದ ಭೀತಿಗೆ ಬೆದರಿ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಸ್ಪಷ್ಟ ನಿಲುವು ತೆಳೆಯದ ಹೊರತು ನಿಷೇಧ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಅಂತರ ರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಖಡಕ್ಕಾಗಿ ಹೇಳಿದೆ.ಡಿಸೆಂಬರ್‌ 10ರ ಒಳಗೆ ಐಒಎ ಸಂವಿಧಾನ ತಿದ್ದುಪಡಿ ಮಾಡಿಕೊಳ್ಳ ಬೇಕು ಎಂದು ಐಒಸಿ ಗಡುವು ನೀಡಿತ್ತು. ಇದಕ್ಕೆ ಮಣಿದು ಭಾರತ ಒಲಿಂಪಿಕ್‌ ಸಂಸ್ಥೆ ಹೋದ ವಾರ ತಿದ್ದುಪಡಿ ಮಾಡಿಕೊಂಡಿತ್ತು. ಆದರೂ, ಈ ಕ್ರಮ ಐಒಸಿಗೆ ಪೂರ್ಣ ತೃಪ್ತಿ ನೀಡಿಲ್ಲ.ಹೋದ ವಾರ ನಡೆದ ಸಭೆಯಲ್ಲಿ ಫೆಬ್ರುವರಿ 9ರಂದು ಚುನಾವಣೆ ನಡೆಸುವ ಬಗ್ಗೆ ಐಒಎ ತೀರ್ಮಾನಿಸಿದೆ. ಆದರೆ, ಈ ಚುನಾವಣೆಯಲ್ಲಿ ಅಭಯ್‌ ಸಿಂಗ್‌ ಚೌಟಾಲ ಮತ್ತು ಲಲಿತ್‌ ಭಾನೋಟ್‌ ಸ್ಪರ್ಧಿಸುವಂತಿಲ್ಲ. ಏಕೆಂದರೆ, ಭ್ರಷ್ಟಾಚಾರ ಒಳಗೊಂಡಂತೆ ಇತರೆ ಯಾವುದೇ ಕ್ರಿಮಿನಲ್‌ ಪ್ರಕರಣ ಗಳಲ್ಲಿ ಆರೋಪ ಎದುರಿಸುತ್ತಿರುವವರು ಚುನಾವಣೆಯಲ್ಲಿ ಕಣಕ್ಕಿಳಿಯುವಂತಿಲ್ಲ.

ಪ್ರತಿಕ್ರಿಯಿಸಿ (+)