ಬುಧವಾರ, ಜೂನ್ 23, 2021
28 °C
ಕಾಂಗ್ರೆಸ್‌ ರೋಡ್‌ ಷೋನಲ್ಲಿ ವೀರಪ್ಪ ಮೊಯಿಲಿ

ಸಂಶೋಧನೆಯ ಫಲ ಎತ್ತಿನ ಹೊಳೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ:  ಕಳೆದ ಬಾರಿಯ ಫಲಿ­ತಾಂಶಕ್ಕಿಂತಲೂ ಈ ಬಾರಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಲ್ಲಿ ಜಯ­ಗಳಿ­ಸುವ ಮೂಲಕ ಕೇಂದ್ರದಲ್ಲಿ ಅಧಿಕಾ­ರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಹಾಗೂ ಚಿಕ್ಕಾಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಹೇಳಿದರು.ಸೋಮವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ನಡೆದ ಭಾರತ್‌ ನಿರ್ಮಾಣ್‌ ಸಭೆ ಹಾಗೂ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಐದು ವರ್ಷಗಳ ಸತತ ಪ್ರಯತ್ನ ಹಾಗೂ ಸಂಶೋಧನೆಯ ಫಲವಾಗಿ ಎತ್ತಿನ ಹೊಳೆ ಯೋಜನೆಯನ್ನು ರೂಪಿ­ಸ­ಲಾಗಿದೆ. ಪಕ್ಷದ ಕಾರ್ಯಕರ್ತರು ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ಮತದಾರ­ರಿಗೆ ತಿಳಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಮಧುರೆ ಹೋಬ­ಳಿಯ ಜೆಡಿಎಸ್ ಮುಖಂಡ­ರಾದ ಚುಂಚೇಗೌಡ, ಆರ್‌.ಸಿ.ರಾಮ­ಲಿಂಗಯ್ಯ, ಕನ್ನಮಂಗಲ ಸಿದ್ದರಾಮಣ್ಣ, ಸಿ.ರಾಮಕೃಷ್ಣ, ಮಾಜಿ ನಗರಸಭೆ ಸದಸ್ಯ ಎಸ್‌.ದಯಾನಂದ್‌, ಗಂಟಿಗಾನ­ಹಳ್ಳಿ ಗ್ರಾ.ಪಂ.ಸದಸ್ಯ ಆರ್‌.ರಂಗಪ್ಪ ಸೇರಿದಂತೆ ವಿವಿಧ ಪಕ್ಷಗಳ ಮುಖಂ­ಡರು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪ­ಡೆಯಾದರು.ಶಾಸಕ ಟಿ.ವೆಂಕಟರಮಣಯ್ಯ, ಮುಖಂಡ­ರಾದ ಆರ್‌.ಜಿ.ವೆಂಕಟಾ­ಚ­ಲಯ್ಯ,

ಸಿ.ಡಿ.ಸತ್ಯನಾರಾಯಣಗೌಡ, ಕೆಪಿ­ಸಿಸಿ ರಾಜ್ಯ ಕಾರ್ಯದರ್ಶಿ ಜಿ.ಎ.­ಭಾವಾ, ಕೆಪಿಸಿಸಿ ಸದಸ್ಯ ಎಂ.ಜಿ.­ಶ್ರೀನಿ­ವಾಸ್‌, ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ತಿ.ರಂಗರಾಜ್‌, ಉಪಾಧ್ಯಕ್ಷ ಕೆ.ಎಸ್‌­.­ರವಿ, ಜಿ.ಎಂ.ಚನ್ನಪ್ಪ, ಜಿ.ಲಕ್ಷ್ಮೀ­ಪತಿ, ಡಿ.ವಿ.ಅಶ್ವತ್ಥಪ್ಪ, ಕಾಂಗ್ರೆಸ್‌ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಆದಿತ್ಯ ನಾಗೇಶ್‌, ಕಾಂಗ್ರೆಸ್‌ ಎಸ್ಸಿ,ಎಸ್ಟಿ ನಗರ ಅಧ್ಯಕ್ಷ ಆಂಜನಮೂರ್ತಿ, ಕಾಂಗ್ರೆಸ್‌ ಯುವಘಟಕದ ತಾಲ್ಲೂಕು ಅಧ್ಯಕ್ಷ ಸಿದ್ದಬೈರೇಗೌಡ, ಎಂ.ವೆಂಕಟೇಶ್‌, ಕಾಂಗ್ರೆಸ್‌ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಅಶ್ವಿನಿ, ನಗರ ಅಧ್ಯಕ್ಷೆ ಎಚ್‌.ಎಸ್‌.ರೇವತಿ, ಜಯ­ಲಕ್ಷ್ಮಮ್ಮ, ನರಸಪ್ಪ,  ನಾರಾಯಣಗೌಡ, ಡಿ.ಜಿ.ರಾಜ­ಗೋಪಾಲ್‌ ಮತ್ತಿತರರು ಹಾಜರಿ­ದ್ದರು.ಇದಕ್ಕೂ ಮೊದಲು ತಾಲ್ಲೂಕಿನ ರಾಜಘಟ್ಟ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸುವ ಮೂಲಕ ವಿವಿಧ ಗ್ರಾಮಗಳಲ್ಲಿ ರೋಡ್‌ ಷೋ ನಡೆಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.