ಮಂಗಳವಾರ, ಮೇ 18, 2021
30 °C

ಸಂಸೆ-ಬೆಳ್ತಂಗಡಿ ರಸ್ತೆ ನಿರ್ಮಾಣ: ಸಂಸದ ಜಯಪ್ರಕಾಶ್ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಬಹುನಿರೀಕ್ಷೆಯ ಸಂಸೆ-ಎಳನೀರು- ದಿಡಪೆ- ಬೆಳ್ತಂಗಡಿ ರಸ್ತೆ ನಿರ್ಮಾಣಕ್ಕೆ ಇರುವ ಆತಂಕ ನಿವಾರಣೆ ಮಾಡಲು ಒತ್ತು ನೀಡುವುದಾಗಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.ಪಟ್ಟಣದ ದುರ್ಗಾ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳಸ-ಧರ್ಮಸ್ಥಳವನ್ನು ಕೇವಲ 45 ಕಿ.ಮೀ.ನಲ್ಲೇ ಸಂಪರ್ಕಿಸುವ ಎಳನೀರು-ದಿಡಪೆ ರಸ್ತೆ ನಿರ್ಮಾಣಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆಗಳ ತಕರಾರು ಇದೆ. ಆ ತೊಡಕನ್ನು ನಿವಾರಿಸಿ ರಸ್ತೆ ನಿರ್ಮಿಸಲು ಇರುವ ಅವಕಾಶಗಳ ಬಗ್ಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದರು.  ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿಯು ಸಂಸದರಿಗೆ ಹಲವು ಬೇಡಿಕೆಗಳಿದ್ದ ಮನವಿ ಪತ್ರ ಸಲ್ಲಿಸಿತು. ಹುಲಿ ಸಂರಕ್ಷಣೆ ಯೋಜನೆಯಿಂದ ಜನರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಹಳದಿ ಎಲೆ ರೋಗ ಬಾಧಿತ ತೋಟದ ಮಾಲೀಕರು ಮತ್ತು ಕಾಫಿ ಬೆಳೆಗಾರರಿಗೆ ನೆರವು ನೀಡಬೇಕು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕಳಸ ಹೋಬಳಿಯ ಅನೇಕ ರಸ್ತೆಗಳನ್ನು ಸೇರ್ಪಡೆಗೊಳಿಸಬೇಕು. ಪಾಳು ಬಿದ್ದಿರುವ ಕುದುರೆಮುಖ ಪಟ್ಟಣವನ್ನು ಸದ್ಬಳಕೆ ಮಾಡಬೇಕು ಎಂಬುವು ಪ್ರಮುಖ ಅಂಶಗಳಾಗಿದ್ದವು.ಪ್ರಾಸ್ತಾವಿಕ ಮಾತನಾಡಿದ ಕೆಪಿಸಿಸಿ ಸದಸ್ಯ ಬಿ.ಎಲ್.ರಾಮದಾಸ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಟಾನದ ಬಗ್ಗೆ ಹೆಗ್ಡೆ ನಿಗಾ ವಹಿಸಬೇಕು. ಪ್ರತಿ ಬೂತ್ ಮಟ್ಟದಲ್ಲೂ ಸಭೆ ನಡೆಸಿ ಜನರ ಸಮಸ್ಯೆ ಅರಿಯಬೇಕು. ಬಡವರ ಪರವಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಜಯಪ್ರಕಾಶ್ ಹೆಗ್ಡೆಯಂತಹ ಅಭ್ಯರ್ಥಿಗಳನ್ನೇ ಆರಿಸಿದರೆ ಜಿಲ್ಲೆಯ ಎಲ್ಲ 5 ವಿಧಾನಸಭಾ ಕ್ಷೇತ್ರಗಳನ್ನೂ ಗೆಲ್ಲಬಹುದು. ಮತದಾರರು ಪ್ರಬುದ್ಧರಾಗಿದ್ದಾರೆ. ಅವರಿಗೆ ಗೌರವ ತರುವಂತಹ ಕೆಲಸಕ್ಕೆ ಮಾತ್ರ ಮಾನ್ಯತೆ ನೀಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ ಅಭಿಪ್ರಾಯಪಟ್ಟರು.ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ ಭವಿಷ್ಯದಲ್ಲಿ ತಿರಸ್ಕ್ರತರಾಗುತ್ತಾರೆ ಎಂದು ಮುಖಂಡ ಚಂದ್ರಪ್ಪ ಹೇಳಿದರು. ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು.ಮತದಾರರಾದ ರಾಮಯ್ಯ ಮತ್ತು ಲೀಲಮ್ಮ ಅವ ರನ್ನು ಹೆಗ್ಡೆ ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.  ಮಾಜಿ ಸಚಿವ ಬಿ.ಬಿ. ನಿಂಗಯ್ಯ  ಮುಖಂಡರಾದ ಕೆ.ಸಿ. ಧರ ಣೇಂದ್ರ, ಹರ್ಷ, ಶ್ರೆನಿವಾಸ್ ಹೆಬ್ಬಾರ್, ಮಹೇಶ್, ವರ್ಧಮಾನಯ್ಯ, ಮಹೇಂದ್ರ, ದೇವದಾಸ್, ಪದ ವೀಧರ ಕ್ಷೇತ್ರದ ಅಭ್ಯರ್ಥಿ ದಿನೇಶ್, ಮಹಾಬಲೇಶ್ವರ ಶಾಸ್ತ್ರಿ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.