ನವದೆಹಲಿ(ಪಿಟಿಐ): ಡಿಸೆಂಬರ್ 5 ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಮತ್ತು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸಕಾರಾತ್ಮಕ ವಹಿವಾಟು ದಾಖಲಿಸಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ನವೆಂಬರ್ನಲ್ಲಿನ ವಾಹನ ಮಾರಾಟ ಅಂಕಿ ಅಂಶಗಳು ಡಿ. 2ರಂದು ಪ್ರಕಟಗೊಳ್ಳಲಿವೆ. ಜತೆಗೆ ಡಾಲರ್ ವಿರುದ್ಧ ಏರಿಳಿತ ಕಾಣುತ್ತಿರುವ ರೂಪಾಯಿ ವಿನಿಮಯ ಮೌಲ್ಯ ಕೂಡ ವಿದೇಶಿ ಸಾಂಸ್ಥಿಕ ಹೂಡಿಕೆ(ಎಫ್ಐಐ) ನಿರ್ಧರಿ ಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

2ನೇ ತ್ರೈಮಾಸಿಕದಲ್ಲಿ ‘ಜಿಡಿಪಿ’ ಅಲ್ಪ ಪ್ರಗತಿ ಕಂಡಿರುವುದು ಸಹ ಪೇಟೆಯಲ್ಲಿ ಸಕಾರಾತ್ಮಕ ವಾತಾವರಣ ಮೂಡಿಸಿದೆ ಎಂದು ರೆಲಿಗೇರ್ ಸೆಕ್ಯುರಿ ಟೀಸ್ ಹೇಳಿದೆ. ಕಳೆದ ವಾರ ಸೂಚ್ಯಂಕ ಒಟ್ಟಾರೆ 574 ಅಂಶಗಳಷ್ಟು ಏರಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.