ಮಂಗಳವಾರ, ಜೂನ್ 15, 2021
21 °C

ಸಚಿನ್‌ ಸಾಧನೆ ಅತ್ಯದ್ಭುತ: ಕಾಲಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಪ್‌ ಟೌನ್‌ (ಪಿಟಿಐ): ‘ಸಚಿನ್‌ ತೆಂಡೂಲ್ಕರ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ನಾನು ಹೇಳಲಾರೆ. ಆದರೆ ಅಸಾಧಾರಣವಾದ ಸಾಧನೆ ಹಾಗೂ ಕ್ರೀಡಾ ಮನೋಭಾವದಿಂದ ಅವರು ತಮ್ಮ  ವೃತ್ತಿಜೀವನದ ಉದ್ದಕ್ಕೂ ಕ್ರಿಕೆಟ್‌ ಆಟವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದಿದ್ದಾರೆ’ ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಜಾಕ್‌ ಕಾಲಿಸ್‌ ಅಭಿಪ್ರಾಯಪಟ್ಟಿದ್ದಾರೆ.‘ಸಚಿನ್‌ ವಿಶ್ವ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅಪಾರ.  ಈ ಮೂಲಕ  ವಿಶ್ವಮಟ್ಟದಲ್ಲಿ ಕ್ರಿಕೆಟ್‌ ಆಟದ ಬೆಳವಣಿಗೆಗೆ ಕಾರಣರಾಗಿದ್ದಾರೆ.  ಅವರು ಆಟದ ವೇಳೆ ಸಾಕಷ್ಟು ಕಠಿಣ ಹಾದಿಯನ್ನು ಸವೆಸಿದ್ದರೂ ಕೂಡಾ ಎಂದಿಗೂ ಕ್ರೀಡಾ ಮನೋಭಾವಕ್ಕೆ ಧಕ್ಕೆ ಆಗುವಂತಹ ಕೆಲಸ ಮಾಡಿಲ್ಲ’ ಎಂದು ಕಾಲಿಸ್‌  ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.