ಸಚಿವ ತಂಗಡಗಿ ವಜಾಕ್ಕೆ ಮನವಿ

ಶನಿವಾರ, ಜೂಲೈ 20, 2019
24 °C

ಸಚಿವ ತಂಗಡಗಿ ವಜಾಕ್ಕೆ ಮನವಿ

Published:
Updated:

ನವದೆಹಲಿ: ಬೇರೆಯವರ ನಿವೇಶನದಲ್ಲಿ ತಮ್ಮ ಸಹೋದರನಿಗೆ ಅಕ್ರಮವಾಗಿ ಮನೆಕಟ್ಟಲು ಬೆಂಬಲ ನೀಡಿದ ಆರೋಪಕ್ಕೆ ಸಿಲುಕಿರುವ ಸಚಿವ ಶಿವರಾಜ ತಂಗಡಗಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ವಕೀಲ ಅಮೃತೇಶ್ ಕಾಂಗ್ರೆಸ್ ಹೈಕಮಾಂಡ್‌ಗೆ ಶನಿವಾರ ಮನವಿ ಸಲ್ಲಿಸಿದರು.ಅಕ್ರಮವಾಗಿ ಮನೆ ಕಟ್ಟಿದರು ಎನ್ನಲಾದ ಪ್ರಕರಣ ಬಯಲಿಗೆ ತಂದ ಜಿಲ್ಲಾಧಿಕಾರಿ ಅವರ ವರ್ಗಾವಣೆಗೆ ಒತ್ತಡ ಹೇರಿದ ಸಚಿವರನ್ನು ಕೂಡಲೇ ವಜಾ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.ಹೈಕಮಾಂಡ್ ನಾಯಕರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲು ಆಗದ ಕಾರಣಕ್ಕೆ ಅವರ ಆಪ್ತ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಅಮೃತೇಶ್ ಮನವಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry