ಭಾನುವಾರ, ಜನವರಿ 19, 2020
29 °C

ಸದ್ಯದಲ್ಲೇ ವಿದಾಯ ಹೇಳಲಿರುವ ರಾಹುಲ್ ದ್ರಾವಿಡ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಕಂಡ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಸದ್ಯದಲ್ಲಿ ವಿದಾಯ ಹೇಳಲಿದ್ದಾರೆ ಎಂಬುದು ತಿಳಿದು ಬಂದಿದೆ.ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲೂ ಬೇಗನೇ ವಿಕೆಟ್ ಒಪ್ಪಿಸಿದ ಬಳಿಕ ಅವರು ಕೆಲ ಸಹ ಆಟಗಾರರಿಗೆ ವಿದಾಯ ಹೇಳಲಿರುವ ವಿಷಯವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದ್ರಾವಿಡ್ (13288) ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.ಬೆಂಗಳೂರಿನ ಈ ಬ್ಯಾಟ್ಸ್‌ಮನ್ ಶುಕ್ರವಾರ 25 ರನ್ ಗಳಿಸಿ ವೇಗಿ ರ‌್ಯಾನ್ ಹ್ಯಾರಿಸ್‌ಗೆ ವಿಕೆಟ್ ಒಪ್ಪಿಸಿದರು. ಈ ಸರಣಿಯ ಎಂಟು ಇನಿಂಗ್ಸ್‌ಗಳಿಂದ ಅವರು 24.25 ಸರಾಸರಿಯಲ್ಲಿ ಕೇವಲ 194 ರನ್ ಗಳಿಸಿದ್ದಾರೆ. ಇದರಲ್ಲಿ ಆರು ಬಾರಿ ಬೌಲ್ಡ್ ಆದರು. ದ್ರಾವಿಡ್ ಈಗಾಗಲೇ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)