ಕಂಪ್ಲಿ: ಇಲ್ಲಿಗೆ ಸಮೀಪದ ದರೋಜಿ ಕೆರೆ ನೀರು ಬಳಕೆದಾರ ಸಹಕಾರ ಸಂಘ ಪದಾಧಿಕಾರಿಗಳು ಮತ್ತು ನೂರಾರು ರೈತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದರೋಜಿ ಪ್ರವಾಸಿ ಮಂದಿರದ ರಾಜ್ಯ ಹೆದ್ದಾರಿ-29ರಲ್ಲಿ ಶನಿವಾರ ರಸ್ತೆತಡೆ ನಡೆಸಿದರು.ದರೋಜಿ ಕೆರೆ ವ್ಯಾಪ್ತಿಯ ಹಳೇದರೋಜಿ, ಹೊಸದರೋಜಿ, ಮಾದಾಪುರ, ಸೋಮಲಾಪುರ, ಹೊನ್ನಳ್ಳಿ, ಮಾವಿನಹಳ್ಳಿ, ಸುಗ್ಗೇನಹಳ್ಳಿ, ಶ್ರೀರಾಮರಂಗಾಪುರ, ಗೋನಾಳ್ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು, 18ತಿಂಗಳಿಂದ ಸಾವಿರಾರು ಎಕರೆ ಭೂಮಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ದೂರಿದರು. ನೀರಿಲ್ಲದೇ ಇಳುವರಿ ಕುಂಠಿತಗೊಂಡು ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.

ದರೋಜಿ ಕೆರೆ ಕೋಡಿ ಕಾಮಗಾರಿ ಪೂರ್ಣಗೊಳಿಸಬೇಕು. ಕೆರೆ ವ್ಯಾಪ್ತಿಯ 1,2 ಮತ್ತು 3ನೇ ತೂಬುಗಳಲ್ಲಿ ಬರುವ ಕಾಲುವೆ ಮತ್ತು ಉಪ ಕಾಲುವೆಗಳ ಹೂಳು, ಬೇಲಿ ಕಡಿದು ದುರಸ್ತಿ ಮಾಡಿಸಬೇಕು. ಅಚ್ಚುಕಟ್ಟು ಅಡಿ ಬರುವ ಎಲ್ಲಾ ರಸ್ತೆಗಳ ದುರಸ್ತಿ ಮತ್ತು ವಡ್ಡುಗಟ್ಟೆಗಳ ದುರಸ್ತಿ ಶೀಘ್ರ ಕೈಗೊಳ್ಳಬೇಕು. ನೀರಗಂಟಿಗಳ, ವರ್ಕ್ ಇನ್ಸ್ಪೆಕ್ಟರ್ಗಳ ನೇಮಕ ಸೇರಿದಂತೆ ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸಿದರು. ನಿರ್ಲಕ್ಷ್ಯ ತಳೆದ ಅಧಿಕಾರಿಗಳ ಮತ್ತು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಪ್ಪ, ರೈತರಿಂದ ಮನವಿ ಸ್ವೀಕರಿಸಿ ಸಂಕಷ್ಟಗಳ ಕುರಿತು ಹಲವಾರು ಸುತ್ತಿನ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಮತ್ತು ರೈತರ ಮಧ್ಯೆ ಮಾತಿನ ವಾಗ್ವಾದ ನಡೆಯಿತು. ಕೆಲ ಸಮಯದ ನಂತರ ವಾತಾವರಣ ತಿಳಿಗೊಂಡಿತು.ರೈತರ 10 ಬೇಡಿಕೆಗಳಲ್ಲಿ ಈಗಾಗಲೇ ಕಾಲುವೆಯಲ್ಲಿ ನೀರು ಸುಲಭವಾಗಿ ಹರಿಯಲು ತಕ್ಷಣ ಹೂಳು ಮೇಲೆತ್ತುವ ಕಾರ್ಯ, ಬೇಲಿ ಕಡಿಯುವ ಕಾರ್ಯವನ್ನು ಆರಂಭಿಸಲಾಗಿದೆ. ಕೆರೆಯ 2ನೇ ತೂಬು ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಕೆರೆ ಕೋಡಿ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಇನ್ನುಳಿದ ಬೇಡಿಕೆಗಳನ್ನು ಇಲಾಖೆ ಮುಖ್ಯ ಎಂಜಿನಿಯರ್ ಮತ್ತು ಅಧೀಕ್ಷಕ ಎಂಜಿನಿಯರ್ ಗಮನಕ್ಕೆ ತಂದು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ತಿಳಿಸಿದರು.

ಮಧ್ಯಾಹ್ನ 1ಗಂಟೆಯವರೆಗೆ ರೈತರು ರಸ್ತೆ ತಡೆ ನಡೆಸಿದ್ದರಿಂದ ಪ್ರಯಾಣಿಕರು ಪ್ರಯಾಸ ಪಡಬೇಕಾಯಿತು. ಮುಂಜಾಗ್ರತೆಯಾಗಿ ಸಾರಿಗೆ ಬಸ್ಗಳನ್ನು ಕುರುಗೋಡು ಮಾರ್ಗವಾಗಿ ಓಡಿಸಲಾಯಿತು. ಮಧ್ಯಾಹ್ನದ ನಂತರ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಂಡಿತು.ನೀರು ಬಳಕೆದಾರರ ಸಹಕಾರ ಸಂಘ ಭಾಗ-1ರ ಅಧ್ಯಕ್ಷ ಸಿ. ರಾಮಾಂಜಿನೇಯ ಮತ್ತು ಭಾಗ-2ರ ಅಧ್ಯಕ್ಷ ವಿ. ತಿಮ್ಮಪ್ಪ, ಡಾ. ರಾಮಣ್ಣ, ನರಸಿಂಹಮೂರ್ತಿ, ಪಿ.ಎಸ್. ಲಿಂಗಪ್ಪ, ಕ್ರಿಷ್ಣಪ್ಪಶೆಟ್ಟಿ, ಎಚ್. ದಾನಪ್ಪ, ಟಿ. ರಸೂಲ್, ಹುಸೇನ್ಸಾಬ್, ಮಾರೆಪ್ಪ, ಕೊಂಡಯ್ಯ, ವಿ. ಜನಾರ್ದನ, ಬೂದಿಹಳ್ಳಿ ರಾಮಪ್ಪ, ಲಿಂಗಪ್ಪ, ಯಮುನಪ್ಪ, ಈಶ್ವರ್ ಒಡೆಯರ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ವೆಂಕಟೇಶ್, ವೀರೇಶ್, ಷಣ್ಮುಖಪ್ಪ, ಹೂವಣ್ಣ, ದೇವಣ್ಣ, ರಾಜಶೇಖರ, ಪಂಪನಗೌಡ, ಕಟ್ಟೆಪ್ಪ, ನಾರಾಯಣಸ್ವಾಮಿ, ಹನುಮಂತಪ್ಪ, ಚಂದ್ರಮೌಳಿ, ಲಕ್ಷ್ಮಯ್ಯ, ಲಕ್ಷ್ಮಿನಾರಾಯಣ, ಮಸ್ತಾನ್ಸಾಬ್, ಗಂಗಣ್ಣ, ಎ. ಶಂಕ್ರಪ್ಪ, ಹುಸೇನ್ಸಾಬ್, ಇಲಾಖೆ ಎಇಇ ಹನುಮಂತಪ್ಪ, ಎ.ಇ ಅಲಗನಾಥನ್, ವಿಘ್ನೇಶ್ ಇತರರು ಹಾಜರಿದ್ದರು.ಹಳೇದರೋಜಿ, ಹೊಸದರೋಜಿ, ಮಾದಾಪುರ, ಸೋಮಲಾಪುರ, ಹೊನ್ನಳ್ಳಿ, ಮಾವಿನಹಳ್ಳಿ, ಸುಗ್ಗೇನಹಳ್ಳಿ, ಶ್ರೀರಾಮರಂಗಾಪುರ, ಗೋನಾಳ್ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.