ಭಾನುವಾರ, ಮೇ 9, 2021
18 °C

ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ರಾಜ್ಯದಲ್ಲಿ ಕನ್ನಡ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಗಳನ್ನು ವಾಪಸ್ಸು  ಪಡೆಯುವಂತೆ ಒತ್ತಾಯಿಸಿ ಕರ್ನಾ ಟಕ ನವನಿರ್ಮಾಣ ವೇದಿಕೆಯವರು ಹಾಗೂ ತಮ್ಮ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಟಾಂಗಾ ಸಂಘಟನೆಯವರು ಸೋಮವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ನವನಿರ್ಮಾಣ ವೇದಿಕೆ: `ಸುಮಾರು 15 ವರ್ಷಗಳಿಂದ ಕನ್ನಡ ನಾಡು-ನುಡಿ, ನೆಲ-ಜಲ- ಭಾಷೆಗೆ ಸಂಬಂಧಿಸಿದಂತೆ ಹೋರಾಟ ನಡೆಸಿದ ಕನ್ನಡ ಕಾರ್ಯಕರ್ತರ ಮೇಲೆ ಸರ್ಕಾರ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದೆ. ತಕ್ಷಣವೇ ಅವುಗಳನ್ನು ವಾಪಸ್ಸು ಪಡೆದುಕೊಳ್ಳಬೇಕು' ಎಂದು ವೇದಿಕೆಯ ಅಧ್ಯಕ್ಷ ಶೇಷರಾವ ಎಸ್. ಮಾನೆ ಒತ್ತಾಯಿಸಿದರು.ನೆರೆ ರಾಜ್ಯಗಳಲ್ಲಿ ಕನ್ನಡಿಗರ ಮೇಲೆ ಆಗು ತ್ತಿರುವ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘಟನೆಗಳು ಮಾಡಿರುವ ಹೋರಾಟಕ್ಕೆ ಪ್ರತಿಫಲವಾಗಿ ಹಿಂದಿನ ಸರ್ಕಾರ ಸುಳ್ಳು ಮೊಕ ದ್ದಮೆ ದಾಖಲಿಸಿ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಂ.ಎಂ. ಖಲಾಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ ಕುಲಕರ್ಣಿ, ಶಾಂತು ಢವಳಗಿ, ಸಿದ್ದು ಶಿಂಧೆ, ಲೋಹಿತ ಪಾತ್ರೊಟ, ಸಂಗಮೇಶ ಜಾಧವ ಇತರರು ಪಾಲ್ಗೊಂಡಿದ್ದರು.ಟಾಂಗಾದವರು: ಇಲ್ಲಿಯ ಬಸ್ ನಿಲ್ದಾಣ, ರೈಲು ನಿಲ್ದಾಣ, ಜಯಶ್ರೀ ಚಿತ್ರಮಂದಿರ, ಬಿಎಲ್‌ಡಿಇ ಆಸ್ಪತ್ರೆ, ಗಾಂಧಿಚೌಕ್ ಟಾಂಗಾ ನಿಲ್ದಾಣ ಹತ್ತಿರದ ನೀರಿನ ಅರವಟ್ಟಿಗೆ ಸಮರ್ಪಕ ನೀರು ಪೂರೈಸಬೇಕು. ರಾತ್ರಿ ವೇಳೆಯಲ್ಲಿ ಅಲ್ಲಿ ಕೈಗಾಡಿ ಗಳು ನಿಲ್ಲುವುದನ್ನು ನಿಷೇಧಿಸಬೇಕು ಎಂದು ಟಾಂಗಾ ಸಂಘಟನೆಯ ಅಧ್ಯಕ್ಷ ಮಾರುತಿ ಕೃಷ್ಣಾ ವಠಾರಕರ ಒತ್ತಾಯಿಸಿದರು.ಮಹಾರಾಷ್ಟ್ರಕ್ಕೆ ಕಣಕಿ ಸಾಗಾಟ ನಿಷೇಧಿ ಸಬೇಕು. ಎಲ್.ಬಿ.ಎಸ್. ಮಾರುಕಟ್ಟೆ, ಎಂ. ಆರ್. ಹೋಟೆಲ್ ಹತ್ತಿರ ಆಟೋ ನಿಲ್ಲಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ತಮ್ಮ ಟಾಂಗಾಗಳೊಂದಿಗೆ ಕೆಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.