ಪಡುಬಿದ್ರಿ: ಯುಪಿಸಿಎಲ್ನಿಂದ ಮತ್ಸ್ಯ ಕ್ಷಾಮ, ಕುಡಿಯುವ ನೀರಿನ ಸಮಸ್ಯೆ, ಪಡುಬಿದ್ರಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ವಿಳಂಬ, ಕಡಲುಕೊರೆತ, ನದಿ ಉಪ್ಪು ನೀರು ಸಮಸ್ಯೆ, ಘನ ತ್ಯಾಜ್ಯ ವಿಲೇವಾರಿ ಸಹಿತ ಹಲವಾರು ಸಮಸ್ಯೆಗಳು.

ಈ ಎಲ್ಲ ಸಮಸ್ಯೆಗಳನ್ನು ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕಾಣಬಹುದು. ಪಡುಬಿದ್ರಿ, ಹೆಜಮಾಡಿ, ಫಲಿಮಾರು, ಎರ್ಮಾಳು ತೆಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನೊಳಗೊಂಡ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆಗಳು ಬೆಟ್ಟದಷ್ಟು ಇದ್ದರೂ ಪರಿಹಾರ ಕಂಡಿದ್ದು ಕೆಲವೇ ಕೆಲವು ಮಾತ್ರ.

ಕಾಪು ಗ್ರಾಮ ಪಂಚಾಯಿತಿಯು ಪುರಸಭೆಯಾಗಿ ಇತ್ತೀಚೆಗೆ ಮೇಲ್ದರ್ಜೆ ಗೇರಿದೆ. ಆದ್ದರಿಂದ ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆ ಉಚ್ಚಿಲ ಬಡಾ ಗ್ರಾಮ ಪಡುಬಿದ್ರಿ ಕ್ಷೇತ್ರದಲ್ಲಿದ್ದರೆ, ಈ ಬಾರಿ ಕ್ಷೇತ್ರ ಪುನರ್ವಿಂಗ ಡನೆಯಿಂದಾಗಿ ಎಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರ್ಪಡೆ ಗೊಂಡಿದೆ. ಕಾಂಗ್ರೆಸ್ ಭದ್ರಕೋಟೆ ಯಾಗಿದ್ದ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕಳೆದ ಎರಡು ಬಾರಿಯೂ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.

ಕಳೆದ ಬಾರಿ ಬಿಜೆಪಿಯಿಂದ ಗೀತಾಂಜಲಿ ಸುವರ್ಣ ಆಯ್ಕೆಯಾಗಿದ್ದರು. ಆದರೆ, ಅವರ ಆಯ್ಕೆಯ ಬಳಿಕ ನಿರೀಕ್ಷೆಯಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಆಯ್ಕೆಯಾದ ಎರಡು ವರ್ಷಗಳಲ್ಲಿ ಆಸಕ್ತಿಯಿಂದ ಓಡಾಡಿಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಸೇವೆ ಸಲ್ಲಿಸಿದ್ದರು. ಆದರೆ, ಆ ಬಳಿಕ ಇತ್ತ ಕಾಲಿಡುತ್ತಿರಲಿಲ್ಲ ಎಂಬ ಆರೋಪವೂ ಜನರಿಂದ ಕೇಳಿಬರುತ್ತಿವೆ.

ಯುಪಿಸಿಎಲ್ನಿಂದ ಮತ್ಸ್ಯಕ್ಷಾಮ: ಪಡುಬಿದ್ರಿ ಕ್ಷೇತ್ರ ವ್ಯಾಪ್ತಿಯ ಪಾದೆಬೆಟ್ಟು, ತೆಂಕ, ನಂದಿಕೂರು ಗ್ರಾಮದಲ್ಲಿ ಹೆಚ್ಚಾಗಿ ಯುಪಿಸಿಎಲ್ ಸಮಸ್ಯೆಗಳು ಕಾಡುತ್ತಿವೆ. ಈ ಮೂರು ಗ್ರಾಮದಲ್ಲಿ ಕೃಷಿಕರೇ ಅಧಿಕವಾಗಿದ್ದು, ಕೆಲವೊಮ್ಮೆ ಮಳೆಗಾಲ ದಲ್ಲಿ ಕಂಪೆನಿ ಹೊರಸೂಸುವ ಉಪ್ಪು ನೀರಿನಿಂದಾಗಿ ಕೃಷಿಗೆ ಹಾನಿಯಾಗುತ್ತವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಲ್ಲದೆ, ಹಾರುಬೂದಿಯ ಸಮಸ್ಯೆಯೂ ಇದೆ ಎನ್ನುತ್ತಾರೆ ಸ್ಥಳೀಯರು.

ಎರ್ಮಾಳು ಸಮುದ್ರ ಕಿನಾರೆಯಲ್ಲಿ ಕಂಪೆನಿ ಅಳವಡಿಸಿದ ಬೃಹತ್ ಗಾತ್ರದ ಪೈಪ್ಲೈನ್ನಲ್ಲಿ ಸಮುದ್ರದ ನೀರನ್ನು ಸೆಳೆದು ಬಳಿಕ ಸಮುದ್ರಕ್ಕೆ ಹೊರ ಬಿಡುವುದರಿಂದ ಈ ಭಾಗದಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ ಎಂಬುವುದು ಮೀನುಗಾರರ ಆರೋಪ.

ಕುಡಿಯುವ ನೀರು: ಕ್ಷೇತ್ರದ ನಡ್ಸಾಲು, ಹೆಜಮಾಡಿ, ಎರ್ಮಾಳು, ಫಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿ ಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಕುಡಿಯುವ ನೀರಿಗಾಗಿ ಅಲ್ಲಲ್ಲಿ ತೋಡು ವ ಕೊಳವೆ ಬಾವಿ ಹಾಗೂ ಯುಪಿಸಿಎಲ್ ಹಾಗೂ ಸುಜ್ಲಾನ್ನಂತಹ ಬೃಹತ್ ಕಂಪೆನಿಗಳಿಂದಾಗಿ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಹೆಜಮಾಡಿಯ ನಡಿಕುದ್ರುವಿನಲ್ಲಿ ಉಪ್ಪು ನೀರಿನ ಸಮಸ್ಯೆ ಕಂಡುಬರುತ್ತಿವೆ.

ತ್ಯಾಜ್ಯ ಸಮಸ್ಯೆ: ಇದು ಪಡುಬಿದ್ರಿಯಲ್ಲಿ ಇಂದು ನಿನ್ನೆಯದಲ್ಲ. ಹಲವು ವರ್ಷ ಗಳಿಂದಲೂ ಈ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ಹೋಟೆಲ್ಗಳ ತ್ಯಾಜ್ಯ ನೀರನ್ನು ಹಳೆ ಮೆಸ್ಕಾಂ ಕಚೇರಿ ಬಳಿ ಬಿಡುವುದರಿಂದ ಮೆಸ್ಕಾಂ ಕಚೇರಿಯನ್ನೇ ಸ್ವಂತ ಕಟ್ಟಡದಿಂದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೂ ಸಮಸ್ಯೆ ಪರಿಹರಿಸಲು ಇನ್ನೂ ಸಾಧ್ಯವಾಗಿಲ್ಲ. ಅದೇ ರೀತಿ ಕಸ ವಿಲೇವಾರಿ ಸಮಸ್ಯೆಯೂ ಪರಿಹರಿಸಲು ಸಾಧ್ಯವಾಗಿಲ್ಲ. ಇದೇ ರೀತಿಯ ಹಲವು ಸಮಸ್ಯೆಗಳೂ ಈ ಬಾರಿಯ ಚುನಾವಣಾ ವಿಷಯವಾಗಲಿದೆ.

ಇನ್ನಿತರ ಸಮಸ್ಯೆಗಳು: ಹೆಜಮಾಡಿ ಯಂತಹ ಕೋಡಿಯಲ್ಲಿ ನಿರ್ಮಾಣ ಗೊಂಡಿರುವ ಕಿರು ಮೀನುಗಾರಿಕಾ ಬಂ ದರು 10 ವರ್ಷಗಳಾದರೂ ಮೀನುಗಾ ರರ ಉಪಯೋಗಕ್ಕೆ ಸಿಗುತಿ ಲ್ಲ. ಅಲ್ಲದೆ, ಚತುಷ್ಪಥ ಕಾಮಗಾರಿ ನಡೆ ದಿದ್ದರೂ ಪಡುಬಿದ್ರಿಯಲ್ಲಿ ಮಾತ್ರ ಹಲವು ರಾಜಕೀಯ ಕಾರಣಗಳಿಂದ ಈವರೆಗೂ ಹೆದ್ದಾರಿ ವಿಸ್ತರಣಾ ಕಾರ್ಯ ನಡೆದಿಲ್ಲ. ಕಡಲು ಕೊರತೆ ಕೂಡ ಪ್ರಮುಖ ಸಮಸ್ಯೆ.

* ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸಿದ್ದೇನೆ. ಈ ಬಾರಿ 14ನೇ ಹಣ ಕಾಸು ಆಯೋಗದ ಅನುದಾನ ಗ್ರಾಮ ಪಂಚಾಯಿತಿಗೆ ನೀಡಿರುವುದರಿಂದ ಹೆಚ್ಚಿನ ಕೆಲಸ ಮಾಡಲು ಆಗಲಿಲ್ಲ.

ಗೀತಾಂಜಲಿ ಸುವರ್ಣ
ಜಿಲ್ಲಾ ಪಂಚಾಯಿತಿ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.