ಸಮಾಜದ ಆಗುಹೋಗುಗಳತ್ತ ಗಮನ ಹರಿಸಿ

ಬುಧವಾರ, ಮೇ 22, 2019
32 °C

ಸಮಾಜದ ಆಗುಹೋಗುಗಳತ್ತ ಗಮನ ಹರಿಸಿ

Published:
Updated:

ಶನಿವಾರ ಸಂತೆ: ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಅಧ್ಯಯನದತ್ತ ಗಮನ ಹರಿಸದೆ ಸಮಾ ಜದ ಆಗುಹೋಗುಗಳತ್ತಲೂ ದೃಷ್ಟಿ ಹಾಯಿಸಬೇಕು ಎಂದು ಸೋಮವಾರ ಪೇಟೆ ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ರಮೇಶ್ ಅಭಿಪ್ರಾಯಪಟ್ಟರು.ಇಲ್ಲಿನ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್ ಹಾಗೂ ಕಲಾ ಸಂಘವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.ವಿದ್ಯಾಸಂಸ್ಥೆ ನಿರ್ದೇಶಕ ಎ.ಎಂ. ಆನಂದ್ ಮಾತನಾಡಿ, ಸಂಘ ರಚನೆ ಯಿಂದ ವಿದ್ಯಾರ್ಥಿಗಳಿಗೆ ಬಹಳ ಉಪ ಯೋಗವಿದೆ. ತಮ್ಮ ಕಾರ್ಯ ಚಟುವಟಿಕೆಗಳನ್ನು ಸಂಘದ ನಾಯಕರ ಮೂಲಕ ತೋರ್ಪಡಿಸಿಕೊಳ್ಳಬೇಕು ಎಂದರು.ಪ್ರಾಂಶುಪಾಲ ಉಮಾಶಂಕರ್, ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಪಿ.ರಾಜ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಮತ್ತು ಕಲಾ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಉಪಾಧ್ಯಕ್ಷನಾಗಿ ಎಸ್.ಎನ್. ಶೃಂಗಾರ್, ಕಾರ್ಯದರ್ಶಿಯಾಗಿ ಕೆ.ಎಚ್.ಯಶ್ವಂತ್, ಕ್ರೀಡಾ ಕಾರ್ಯ ದರ್ಶಿಗಳಾಗಿ ಕೆ.ಎಲ್.ನಂದೀಶ್, ಸಿ. ಎಸ್.ರಮ್ಯಾ, ಸಾಂಸ್ಕೃತಿಕ ಕಾರ್ಯದರ್ಶಿ ಗಳಾಗಿ ಕೆ.ಎಚ್.ಯೋಗೇಂದ್ರ ಮತ್ತು ಬಿ.ಬಿ.ತೀರ್ಥಾನಂದ ಅವರನ್ನು ಆಯ್ಕೆ ಮಾಡಲಾಯಿತು.ವಿದ್ಯಾಸಂಸ್ಥೆ ಮಾಜಿ ಅಧ್ಯಕ್ಷ ಎನ್. ಬಿ.ಗುಂಡಪ್ಪ, ನಿರ್ದೇಶಕರಾದ ಎನ್. ಕೆ.ಅಪ್ಪಸ್ವಾಮಿ, ಕೆ.ಎಂ.ಜಗನ್‌ಪಾಲ್, ಮಹ್ಮದ್‌ಪಾಶ, ರಂಗೂಬಾಯಿ, ಪುಷ್ಪಾಪೊನ್ನಪ್ಪ ಉಪಸ್ಥಿತರಿದ್ದರು.

ಉಪನ್ಯಾಸಕರಾದ ಮೋಹನ್‌ಕುಮಾರ್ ಸ್ವಾಗತಿಸಿ, ಕುಮಾರಸ್ವಾಮಿ ನಿರೂಪಿಸಿದರು. ವಿದ್ಯಾರ್ಥಿ ಶೃಂಗಾರ್ ವಂದಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry