ಭಾನುವಾರ, ಏಪ್ರಿಲ್ 18, 2021
31 °C

ಸಮಾಜಸೇವೆ ತ್ಯಜಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಧ್ವ ಸಮುದಾಯವೂ ಸೇರಿ, ಅನೇಕ ಜನರಿಗೆ ಪೇಜಾವರ ಮಠದ ಹಿರಿಯ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಗಳವರಲ್ಲಿ ಅಪಾರ ಗೌರವವಿದೆ. ಅವರ ಪಾರಮಾರ್ಥಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆ ಬಹುಜನರ ಬೆಂಬಲವಿರುವುದು ಸರ್ವ ವೇದ್ಯ.ಆದರೂ ಇತ್ತೀಚೆಗಿನ ಅವರ ಕೆಲವು ಸಾಮಾಜಿಕ ಕಾರ್ಯಗಳಿಗೆ ಕೆಲವು ಜನರ ಬೆಂಬಲವಿಲ್ಲ. ಈ ಕಾರಣ ಕೆಲವು ಸಂದರ್ಭಗಳಲ್ಲಿ ಅವರು ಕೆಲವು ಜನರ ಕೋಪ ಕ್ರೋಧಗಳಿಗೆ ಈಡಾಗುತ್ತಿದ್ದಾರೆ. ಇದು ಕೇವಲ ಮಾಧ್ವಸಮುದಾಯದ ಜನರಿಗೆ ಮಾತ್ರವಲ್ಲದೇ ಬೇರೆ ಜನರಿಗೂ ಮಾನಸಿಕವಾಗಿ ಬಹಳ ಅಸಮಾಧಾನವಾಗಿದೆ.ಆದುದರಿಂದ ಈ ಮೂಲಕ ವಿಶ್ವೇತೀರ್ಥ ಶ್ರೀಪಾದಂಗಳವರಲ್ಲಿ ವಿನಂತಿಸುವುದೇನೆಂದರೆ ತಾವು ಕೆಲವು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸದೇ ಆದಷ್ಟು ಹೆಚ್ಚಿಗೆ ಪಾರಮಾರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸಿ, ಸಮಾಜ ಹಾಗೂ ಭಕ್ತಸಮುದಾಯವನ್ನು ಪಾರಮಾರ್ಥಿಕದ ಕಡೆಗೆ ನಡೆಸಬೇಕೆಂದು ಭಿನ್ನವಿಸಿಕೊಳ್ಳುತ್ತಿದ್ದೇನೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.