ಶನಿವಾರ, ಮಾರ್ಚ್ 6, 2021
21 °C

ಸಮುದ್ರದಲ್ಲಿ ಕಂಡ ನೀಲಿ ಕುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮುದ್ರದಲ್ಲಿ ಕಂಡ ನೀಲಿ ಕುಳಿ

ದಕ್ಷಿಣ ಚೀನಾ ಸಮುದ್ರದ ಪ್ಯಾರಾಸೆಲ್‌ ದ್ವೀಪಗಳ ಮಧ್ಯಭಾಗದಲ್ಲಿ ದೈತ್ಯಾಕಾರದ ನೀಲಿ ಕುಳಿಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅದರ ಆಳ ಸುಮಾರು 987 ಅಡಿ! ಇದು ಸಮುದ್ರದ ಮಧ್ಯಭಾಗದಲ್ಲಿ ಪತ್ತೆಯಾಗಿದೆ. ಈ ಹಿಂದೆ ಇಂಥದ್ದೇ ನೀಲಿ ಕುಳಿ ಪತ್ತೆಯಾಗಿತ್ತು.



ಅದನ್ನೇ ಬೃಹತ್‌ ಕುಳಿ ಎಂದುಕೊಳ್ಳಲಾಗಿತ್ತು. ಈಗ ಅದರ ಮೂರು ಪಟ್ಟಿನಷ್ಟು ದೈತ್ಯಾಕಾರ ಹೊಂದಿರುವ ಈ ಕುಳಿ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಇದಕ್ಕೆ ‘ನೀಲಿ ಕುಳಿ’ ಎಂದು ಹೆಸರು ಬರಲು ಕಾರಣ, ಸಮುದ್ರದ ಸುತ್ತಲಿನ ನೀರು ಖಾಲಿಯಾಗಿದ್ದು, ಮಧ್ಯದಲ್ಲಿ ಇರುವ ಕುಳಿಯು, ಮೇಲಿನಿಂದ ನೋಡಿದಾಗ ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. 



ಈ ನೀಲಿ ಕುಳಿಯಲ್ಲಿ 20 ಜಾತಿಯ ಮೀನುಗಳು ಇರುವ ಬಗ್ಗೆ ವಿಜ್ಞಾನಿಗಳು ಹೇಳಿದ್ದಾರೆ. ಈ ಕುಳಿಯಲ್ಲಿ 300 ಅಡಿ ಆಳದ ನಂತರ ಆಮ್ಲಜನಕ ಇಲ್ಲವಂತೆ.  ವಿಡಿಯೊ ನೋಡಲು ಈ ಲಿಂಕ್ ಬಳಸಿ: goo.gl/UxOMsr 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.