ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು, ನಾಡಪ್ರಭು ಕೆಂಪೇಗೌಡರ ಜಯಂತಿ ರಾಜ್ಯದಾದ್ಯಂತ ಆಚರಣೆ ಮಾಡಲು ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಜಾತಿಗಳ ಓಲೈಸುವ ರಾಜಕಾರಣದ ಮಾತುಗಳನ್ನಾಡಿದ್ದಾರೆ.

ನಾಡಿಗೆ ಕೊಡುಗೆಯನ್ನಿತ್ತ ಗಣ್ಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇದನ್ನೇ ಕಾರಣ ಮಾಡಿಕೊಂಡು ಪ್ರತಿಯೊಂದು ಜಯಂತಿಗೂ ಸರ್ಕಾರಿ ರಜೆಯನ್ನು ಘೋಷಣೆ ಮಾಡುತ್ತಾ ಸಾಗಿದರೆ, ರಾಜ್ಯದ ಆಡಳಿತದ ಗತಿ ಏನು?

ಈ ವರ್ಷದಿಂದ ವಾಲ್ಮೀಕಿ ಜಯಂತಿಗೂ ಸರ್ಕಾರಿ ರಜೆ ಜಾರಿಯಾಗಿದೆ. ಇದರ ಬದಲು ರಜೆಯನ್ನು ಘೋಷಣೆ ಮಾಡದೆಯೇ ಆ ದಿನದಂದು ಸರ್ಕಾರಿ ಕಚೇರಿಗಳಲ್ಲೇ ಜಯಂತಿಯನ್ನು ಏಕೆ ಆಚರಿಸಬಾರದು? ವರ್ಷದಲ್ಲಿ ಅರ್ಧದಷ್ಟು ದಿನಗಳು ಇಂತಹ ರಜೆಗಳಲ್ಲಿಯೇ ತುಂಬಿಹೋಗಿವೆ. ಇದರಿಂದ ಸರ್ಕಾರಿ ನೌಕರರು ಸೋಮಾರಿಗಳಾಗದೆ ಇನ್ನೇನು ಮಾಡುತ್ತಾರೆ. ಜಯಂತಿಗಳನ್ನು ಆಚರಿಸಲಿ, ಗಣ್ಯರ ಸ್ಮರಣೆ ನಮ್ಮೆಲ್ಲರ ಸಾಧನೆಗಳಿಗೆ ಆದರ್ಶವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.