ಸಲಿಂಗಕಾಮಿಗಳ ಸ್ವಾತಂತ್ರ್ಯದ ಬಗ್ಗೆ, ಬೇಕು-ಬೇಡಗಳನ್ನು ಪಕ್ಕಕ್ಕಿಟ್ಟು ಅದನ್ನು ಇನ್ನೊಂದು ಮಗ್ಗುಲಿನಿಂದ ನೋಡೋಣ. ಸಲಿಂಗಿಗಳು ತಮ್ಮ ಇಚ್ಛಾನುಸಾರ ತಮಗೆ ಬೇಕಾದವರ ಬಳಿ ತಮ್ಮ ವಾಂಛೆಯನ್ನು ಪೂರೈಸಿಕೊಳ್ಳುವುದು ಅವರ ವ್ಯಕ್ತಿಗತ ಸ್ವಾತಂತ್ರ್ಯ!

ಆದರೆ ಕೆಲವರು ಅಮಾಯಕರನ್ನು, ಚಿಕ್ಕಚಿಕ್ಕ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಾವು ನೋಡುತ್ತೇವೆ. ಹಿರಿಯರು ತಮ್ಮ ಮೇಲೆ ಮಮತೆಯಿಂದ ಕೈ ಹಾಕಿ ಮಾತನಾಡಿಸುತ್ತಾರೆ ಎಂದು ಅಂದು ಕೊಂಡ ಮುಗ್ಧರು ಸುಮ್ಮನಾದರೆ ಮುಂದುವರಿದು ಮುಜುಗರಕ್ಕೀಡು ಮಾಡುತ್ತಾರೆ. ಅಷ್ಟೇ ಅಲ್ಲದೇ ಕತ್ತಲಲ್ಲಿ ಎಷ್ಟೋ ಜನರು ಇಂಥಾ ಹೀನ ಕೃತ್ಯದ ಬಲಿಪಶುಗಳಾಗಿದ್ದನ್ನು ಕೇಳಿದ್ದೇವೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅತ್ಯಾಚಾರಗಳು ಒಂದು ರೀತಿಯ ಹಿಂಸೆಯಾದರೆ ಕೆಲವು ಸಲಿಂಗಿಗಳು ಪುರುಷರನ್ನು ಬಲಿಪಶು ಮಾಡುತ್ತಾರೆ. ಇದು ಇನ್ನೊಂದು ಮಾದರಿಯ ಅತ್ಯಾಚಾರ. ಮಾನಕ್ಕೆ ಹೆದರಿ ಮಹಿಳೆಯರಂತೆಯೇ ಕೆಲ ಪುರುಷರು, ಚಿಕ್ಕ ಬಾಲಕರು ಎಲ್ಲೂ ಬಾಯಿ ಬಿಡುವುದಿಲ್ಲ!

ಇಂತಹ ಹೀನ ಕೃತ್ಯಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆಯೆಂದೇ ಸುಪ್ರೀಂ ಕೋರ್ಟ್ ಇಂಥಾ ತೀರ್ಪಿಗೆ ಮುಂದಾಗಿರಲಿಕ್ಕೂ ಸಾಕು. ಸಾಧಕ-ಬಾಧಕಗಳನ್ನು ಪರಿಗಣಿಸಿ ಮುಂದಡಿ ಇಟ್ಟರೆ ನಾಗರಿಕ ಮೌಲ್ಯ ಉಳಿಯಬಹುದೇನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.