ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಮೊನ್ನೆಯಷ್ಟೇ ಪಾಲ್ಗೊಂಡಿದ್ದ ಸಲ್ಮಾನ್, ಸಿನಿಮಾ ವಿಷಯಕ್ಕಿಂತ ಹೆಚ್ಚಾಗಿ ತಮ್ಮ ಹಳೆಯ ಸಂಬಂಧಗಳ ಬಗೆಗೆ ಹರಟಿದರು. ಇಷ್ಟು ಮಾತ್ರವಲ್ಲ ಎಲ್ಲೂ ಹೇಳದ ಗುಟ್ಟೊಂದನ್ನು ಸಲ್ಮಾನ್ ಬಿಚ್ಚಿಟ್ಟರು. ಅದೇನೆಂದರೆ ಅವರಿನ್ನೂ ಕೌಮಾರ್ಯ ಉಳಿಸಿಕೊಂಡಿದ್ದಾರಂತೆ! ಮದುವೆಯಾಗುವ ಆ ಕನ್ಯೆಗಾಗಿ ನನ್ನ ಕೌಮಾರ್ಯವನ್ನು ಉಳಿಸಿಕೊಂಡಿದ್ದೇನೆ ಎಂದಿದ್ದಾರೆ.

‘ಒಂದು ಕಾಲದಲ್ಲಿ ಮದುವೆಯಾಗಬೇಕೆಂದು ಪ್ರಯತ್ನಿಸಿದೆ. ಆದರೆ ಅದೇಕೋ ಪ್ರಯತ್ನ ಫಲ ನೀಡಲಿಲ್ಲ. ಸಂಗೀತಾ ಬಿಜಲಾನಿಯ ಜತೆಗಿನ ಮದುವೆ ಪ್ರಸ್ತಾಪ ಆಹ್ವಾನ ಪತ್ರಿಕೆಯ ಮುದ್ರಣದವರೆಗೂ ಬಂದು ಮುರಿದು ಬಿತ್ತು. ಅವಳಿಗೆ ಮೋಸ ಮಾಡುವಾಗ ಸಿಕ್ಕಿಬಿದ್ದೆ’ ಎಂದು ಹೇಳಿದ ಸಲ್ಮಾನ್ರ ಮಾತು ಎಷ್ಟು ನಿಜವೋ ಗೊತ್ತಿಲ್ಲ. ಏಕೆಂದರೆ ಕಾರ್ಯಕ್ರಮದ ಕೊನೆಯಲ್ಲಿ, ಇತ್ತೀಚೆಗೆ ತಾವು ಬಹಳ ಸುಳ್ಳು ಹೇಳುತ್ತಿರುವುದಾಗಿ ಅವರು ಒಪ್ಪಿಕೊಂಡರು.

‘ನಾನು ಈಗ ಹೇಗಿದ್ದೇನೋ ಅದೇ ಸರಿ ಎಂದೆನಿಸುತ್ತಿದೆ. ಯಾರೊಂದಿಗೂ ಬಾಳಲು ಯೋಗ್ಯನಾದ ವ್ಯಕ್ತಿ ನಾನಲ್ಲ. ಬಹಳಷ್ಟು ಮಂದಿ ನನ್ನ ಬಳಿ ಬರುತ್ತಾರೆ. ನಾನು ಅಂಥವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತೇನೆ. ಕೆಲವೊಮ್ಮೆ ಅವರಿಂದ ದೂರವಿರಲು ಬಯಸುತ್ತೇನೆ. ಮುಖಕ್ಕೆ ಮುಖ ಕೊಟ್ಟು ಮಾತನಾಡಲು ಇಷ್ಟವಾಗುವುದಿಲ್ಲ. ಈಗ ನೀವೆಲ್ಲೋ ಇದ್ದೀರಿ. ಯಾರೊಂದಿಗೋ ಸುಖವಾಗಿದ್ದೀರಿ. ಅವರೊಂದಿಗೆ ಇರುವಾಗ ನಿಮ್ಮ ತಲೆಯಲ್ಲಿ ಮಾಜಿ ಪ್ರಿಯಕರನ ಚಿತ್ರ ನೆನಪಾಗಬಾರದು ಎಂಬುದು ನನ್ನ ಆಶಯ’ ಎನ್ನುವುದು ಸಲ್ಮಾನ್ರ ಹಿತನುಡಿ.

ಹೊಸತಂತ್ರ
ಸಲ್ಮಾನ್ ಖಾನ್ ತಮ್ಮ ನೂತನ ಸಿನಿಮಾ ‘ಜೈ ಹೋ’ ಟ್ರೇಲರ್ನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ವಿಶೇಷವೆಂದರೆ ಈ ಟ್ರೇಲರನ್ನು ಪತ್ರಿಕಾಗೋಷ್ಠಿ ಕರೆದು, ಮಾಧ್ಯಮದವರ ಮುಂದೆ ಬಿಡುಗಡೆ ಮಾಡುತ್ತಿಲ್ಲ. ಬದಲಾಗಿ ಚಿತ್ರಮಂದಿರವೊಂದರಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸೇರಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

ಸಲ್ಮಾನ್ ಹಾಗೂ ಸೋದರ ಸೋಹೆಲ್ ಖಾನ್ ಅವರೇ ಹಾಕಿಕೊಂಡ ಈ ಯೋಜನೆ ಬಾಲಿವುಡ್ನಲ್ಲೇ ಮೊದಲ ಪ್ರಯತ್ನವಿರಬೇಕು ಎಂದು ಸಿನಿಪ್ರಿಯರೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳ ಟ್ರೇಲರ್ಗಳು ಮಾಧ್ಯಮದವರ ಮುಂದೆ ಬಿಡುಗಡೆಗೊಳ್ಳುತ್ತವೆ.

ಆದರೆ ಸಲ್ಮಾನ್ ಈ ಬಾರಿ ಹೊಸತಂತ್ರ ಹೊಸೆದಿದ್ದಾರೆ. ಅಂದಹಾಗೆ ‘ಜೈ ಹೋ’ ಚಂದನ ಎಂಬ ಚಿತ್ರಮಂದಿರದಲ್ಲಿ ತೆರೆಕಾಣಲಿದೆ. ಸಾಮಾನ್ಯ ಜನತೆ ಮೊದಲಿಗೆ ಸಿನಿಮಾ ಟ್ರೇಲರ್ ನೋಡಬೇಕು ಎಂಬುದು ಅವರ ಉದ್ದೇಶ. ಇದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಲ್ಮಾನ್ ಸಂವಾದವನ್ನೂ ನಡೆಸಲಿದ್ದಾರಂತೆ.

ತೆಲುಗು ಸಿನಿಮಾ ‘ಸ್ಟಾಲಿನ್’ನ ರಿಮೇಕ್ ಚಿತ್ರವಾಗಿರುವ ‘ಜೈ ಹೋ’ದಲ್ಲಿ ಟಬು, ಡೈಸಿ ಶಾ, ಡ್ಯಾನಿ ಮುಂತಾದವರು ಅಭಿನಯಿಸಿದ್ದಾರೆ. ನಿರ್ದೇಶನ ಸೋಹೇಲ್ ಖಾನ್ ಅವರದ್ದಾಗಿದ್ದು, ಜನವರಿ 24ರಂದು ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.