ಭಾನುವಾರ, ಜೂನ್ 13, 2021
21 °C

ಸಹಕಾರ ಮಾರಾಟ ಮಹಾಮಂಡಳ ಗೊಬ್ಬರ ಮಾರಾಟ ಕೇಂದ್ರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಕಾರ ಮಾರಾಟ ಮಹಾಮಂಡಳ ಗೊಬ್ಬರ ಮಾರಾಟ ಕೇಂದ್ರ ಉದ್ಘಾಟನೆ

ಮುಧೋಳ: ಸಹಕಾರಿ ಹಾಗೂ ಸರ್ಕಾರ ಕ್ಷೇತ್ರ ಒಗ್ಗೂಡಿ ಕೆಲಸ ಮಾಡಿದರೆ ನಿರೀಕ್ಷೆ ಮೀರಿದ ಸಾಧನೆ ಮಾಡಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.ನಗರದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು, ಕೃಷಿ ಇಲಾಖೆ, ಸಹಕಾರ ಇಲಾಖೆ ಹಾಗೂ ಇಫ್ಕೊ ಸಂಸ್ಥೆ ಸಹಯೋಗದಲ್ಲಿ ಬುಧವಾರ 40ನೇ ಗೊಬ್ಬರ ಮಾರಾಟ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ಕಳೆದ ಒಂದು ವರ್ಷದ ಅವಧಿಯಲ್ಲಿ ನಿಗಮವು ರೂ 25 ಕೋಟಿ ಲಾಭ ಮಾಡಿದೆ. ಇದಕ್ಕೆ ಮಹಾಮಂಡಳದ ಅಧ್ಯಕ್ಷ ಹಾಲಪ್ಪ ಆಚಾರ್ ಅವರ ಪ್ರಾಮಾಣಿಕ ಸೇವೆ, ಕರ್ತವ್ಯ ನಿಷ್ಠೆ ಕಾರಣ. ಸಹಕಾರ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ಲಾಭದಾಯಕ ವ್ಯವಹಾರ ಸಾಧ್ಯ ಎಂಬುದನ್ನು ತೋರಿಸಿದ್ದಾರೆ ಎಂದು ಶ್ಲಾಘಿಸಿದರು.ಕಬ್ಬಿಗೆ ಗೊಬ್ಬರದ ಅವಶ್ಯಕತೆ ಹೆಚ್ಚಾಗಿರುವ ದರಿಂದ ಶಾಶ್ವತ ಪರಿಹಾರದ ಗುರಿ ಇಟ್ಟುಕೊಂಡು ಮುಧೋಳ ನಗರವನ್ನೇ ಕೇಂದ್ರವನ್ನಾಗಿಸಿಕೊಂಡು ಗೊಬ್ಬರ ಮಾರಾಟ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪ್ರತಿ ಗ್ರಾಮಕ್ಕೂ ಗೊಬ್ಬರ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ರೈತರಿಗೆ ಈ ಲಾಭ ಸಿಗಬೇಕು. ಇಂಥ ಯೋಜನೆಗಳ ಲಾಭವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.ನಿಗಮದ ಅಧ್ಯಕ್ಷ ಹಾಲಪ್ಪ ಆಚಾರ್ ಮಾತನಾಡಿ, ವ್ಯಾಪಾರದ ಏಕೈಕ ದೃಷ್ಟಿಯಿಂದ ರೈತರ ಮುಗ್ಧತೆಯನ್ನು ಖಾಸಗಿ ಕಂಪೆನಿಗಳು ದುರುಪಯೋಗ ಪಡೆಸಿಕೊಳ್ಳುವದನ್ನು ತಪ್ಪಿಸಲು ಮಹಾಮಂಡಳವು ಪ್ರತ್ಯೇಕ ಮಾರಾಟ ಕೇಂದ್ರ ಆರಂಭಿಸಲಾಗಿದೆ ಎಂದು ನುಡಿದರು.ಈ ಸಂದರ್ಭದಲ್ಲಿ ಹಾಲಪ್ಪ ಆಚಾರ್, ಗೋವಿಂದ ಕಾರಜೋಳ, ಸಹಕಾರಿ ಧುರೀಣ ರಾಮಣ್ಣ ತಳೇವಾಡ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಸಚೇತಕ, ಶಾಸಕ ಸಿದ್ದು ಸವದಿ, ಆರ್.ಎಸ್.ತಳೇವಾಡ ಮಾತನಾಡಿದರು. ಶಾಸಕ ಜಿ.ಎಸ್. ನ್ಯಾಮಗೌಡ, ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಮಹಾದೇವಪ್ಪ ಹಟ್ಟಿ, ಎ.ಪಿ.ಎಂ.ಸಿ ಅಧ್ಯಕ್ಷ ಹಣಮಂತ ತುಳಸೀಗೇರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹೇಶ ನಾಗರಡ್ಡಿ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸೈದು ಭೋವಿ, ಬಿಜೆಪಿ ಅಧ್ಯಕ್ಷ ಬಿ.ಎಚ್. ಪಂಚಗಾಂವಿ, ವಕ್ಫ್ ಸಮಿತಿ ಅಧ್ಯಕ್ಷ ಮಿರ್ಜಾ ನಾಯಕವಾಡಿ, ಜಿಪಂ ಮಾಜಿ ಅಧ್ಯಕ್ಷ ಎಲ್.ಕೆ. ಬಳಗಾನೂರ ಉಪಸ್ಥಿತರಿದ್ದರು.ಇಫ್ಕೊ ಸಂಸ್ಥೆಯ ಮುಖ್ಯಸ್ಥ ಎಸ್.ಡಿ. ಮೂಕರ್ತಿಹಾಳ ಸ್ವಾಗತಿಸಿದರು. ಶ್ರಿದೇವಿ ಭಂಡಾರಕರ ಹಾಗೂ ಕೆ.ಎಸ್.ಸಿ.ಎಂ.ಎಫ್‌ನ ವಿಭಾಗ ಮಾರಾಟ ವ್ಯವಸ್ಥಾಪಕ  ಎಸ್.ಬಿ. ಪಾಟೀಲ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.