ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಸಹಜ ಸ್ಥಿತಿಗೆ ಜನಜೀವನ

Published:
Updated:

ಬೆಳಗಾವಿ: ಜಿಲ್ಲೆಯ ಒಂದು ಸೇತುವೆ ಹೊರತುಪಡಿಸಿ ಉಳಿದೆಲ್ಲ ಸೇತುವೆಗಳು ಸೋಮವಾರ ಸಂಚಾರಕ್ಕೆ ಮುಕ್ತವಾಗಿವೆ. ನದಿಗಳ ನೀರು ಹರಿವಿನಲ್ಲಿ ಗಣನೀಯ ಇಳಿಕೆಯಾಗಿದೆ.ಚಿಕ್ಕೋಡಿ ತಾಲ್ಲೂಕಿನ ಎರಡು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದ್ದರೆ, ಗೋಕಾಕ ತಾಲ್ಲೂಕಿನ ದೂಪದಾಳ-ಕೊಣ್ಣೂರು ಸೇತುವೆ ಮಾತ್ರ ನೀರಿನಲ್ಲಿ ಮುಳುಗಿದೆ. ಘಟಪ್ರಭಾ ಅಣೆಕಟ್ಟಿನಿಂದ 6,803 ಹಾಗೂ ಮಲಪ್ರಭಾದಿಂದ 4,018 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.ಚಿಕ್ಕೋಡಿ ವರದಿ: ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ತಾಲ್ಲೂಕಿನ ಕಲ್ಲೋಳ-ಯಡೂರ, ಸದಲಗಾ-ಜನವಾಡ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಜನ ಜೀವನ ಸಹಜಸ್ಥಿತಿಗೆ ಮರಳಿದೆ.

 

Post Comments (+)