ಭಾನುವಾರ, ಜೂನ್ 20, 2021
21 °C
ಸುಬ್ರತೊ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಸಹಾರಾ ಮುಖ್ಯಸ್ಥನಿಗೆ ಜೈಲೇ ಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಐಎಎನ್‌ಎಸ್): ಸಹಾರಾ ಸಮೂಹದ ಅಧ್ಯಕ್ಷ ಸುಬ್ರತೊ ರಾಯ್‌ ಇನ್ನೂ ಕೆಲವು ಕಾಲ ತಿಹಾರ್‌ ಜೈಲಿನಲ್ಲೇ ಕಳೆಯಬೇಕಾಗಿದೆ. ಕಾರಣ, ದೇಶಬಿಟ್ಟು ಹೋಗುವುದಿಲ್ಲ ಎಂಬ ವಾಗ್ದಾ­ನ­ದೊಂದಿಗೆ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡ­ಬೇಕು ಎಂಬ ಅವರ ಮನವಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ತಿರಸ್ಕರಿಸಿದೆ.ನ್ಯಾಯಮೂರ್ತಿಗಳಾದ ಕೆ.ಎಸ್‌. ರಾಧಾಕೃಷ್ಣನ್‌ ಮತ್ತು ಜೆ.ಎಸ್‌. ಕೇಹರ್‌್ ಅವರನ್ನು ಒಳಗೊಂಡ ಪೀಠ ಈ ಹಿಂದೆ ನೀಡಿದ್ದ ತೀರ್ಪನ್ನು ಸಮರ್ಥಿಸಿ­ಕೊಂಡಿತ್ತು.  ಇದೇ ವೇಳೆ ಹೂಡಿಕೆ­ದಾರ­ರಿಗೆ ನೀಡಲು ಸೆಬಿಗೆ ₨19,000 ಕೋಟಿ ಪಾವತಿ ನೀಡಲು ಸುಬ್ರತೊ ಅವರಿಂದ ಯಾವು ದಾದರೂ ಪ್ರಸ್ತಾವಗಳಿವೆಯೇ ಎಂದು   ವಕೀಲ ರಾಂ ಜೇಠ್ಮಲಾನಿ ಅವ­ರನ್ನು ಪ್ರಶ್ನಿಸಿತು.ರಾಯ್‌ ಹಾಗೂ ಸಹಾರಾ ಸಮೂ ಹದ ಇಬ್ಬರು ನಿರ್ದೇಶಕರ ಬಿಡುಗಡೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್‌ ವಿಚಾ­ರಣೆ­ಯನ್ನು ಮಾ.25ಕ್ಕೆ ಮುಂದೂಡಿತು. ಈ ವೇಳೆ ವಕೀಲ ಜೇಠ್ಮಲಾನಿ ರಾಯ್‌   ₨25,000 ಕೋಟಿ ಮರುಪಾವತಿಸಲು ಸಿದ್ಧರಿರುವುದಾಗಿ ಹೇಳಿದರು. ಆದರೆ ಈ ಪ್ರಸ್ತಾವವನ್ನು ಪೀಠ ತಿರಸ್ಕರಿಸಿತು. ಇದೇ ರೀತಿ ಪ್ರಸ್ತಾವವನ್ನು ಸಹಾರಾ ಸಮೂ­ಹವು ಮಾ.7 ರ ವಿಚಾರಣೆಯಲ್ಲಿ ಮುಂದಿಟ್ಟಿತ್ತು. ತಮ್ಮ ಕುಟುಂಬದೊಂದಿಗೆ ಹೋಳಿ ಹಬ್ಬ­ದಲ್ಲಿ ಭಾಗಿಯಾಗಲು ಮತ್ತು ಅನಾ­­ರೋಗ್ಯ ಪೀಡಿತ ತಮ್ಮ ತಾಯಿ ಯನ್ನು ನೋಡಿಕೊಳ್ಳಲು ರಾಯ್‌ ಅವ­ರನ್ನು ಬಿಡುಗಡೆ ಮಾಡಬೇಕು ಎಂದು ಜೇಠ್ಮ­ಲಾನಿ ನ್ಯಾಯಾ ಲಯ­ವನ್ನು ಕೋರಿ­ದರು.  ಆದರೆ ಇದನ್ನು ನ್ಯಾಯ­ಮೂರ್ತಿಗಳ ಮಾನ್ಯ ಮಾಡಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.