ಸೋಮವಾರ, ಜನವರಿ 27, 2020
26 °C

ಸಾಧಕರಿಗೆ ‘ಅವ್ವ’ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಪೊಲೀಸ್‌ ಅಧಿಕಾರಿ ಯಶೋದಾ ವಂಟಗೋಡಿ, ಕೈಗಾರಿಕೋದ್ಯಮಿ ಕಾಡಪ್ಪ ಮೈಸೂರು, ಅಂಕಣಕಾರ ಎ.ಆರ್. ಮಣಿಕಾಂತ್‌, ಹಾಸನದ ಅಂಗವಿಕಲ ಕ್ರೀಡಾಪಟು ಗಿರೀಶ್‌ ನಾಗರಾಜೇ ಗೌಡ, ರಾಯಚೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ರಮೇಶ ಬಲ್ಲಿದ್‌, ಇಥಿಯೋ­ಪಿಯಾದಲ್ಲಿ ನಡೆದ ವಿಶ್ವ ಸಮ್ಮೇಳನ­ದಲ್ಲಿ ಭಾಗವಹಿಸಿದ್ದ ಧಾರವಾಡದ ಸುಜಾತಾ ಆನಿಶೆಟ್ಟರ, ಸ್ನಾತಕೋತ್ತರ ಪದವಿ ಪರೀಕ್ಷೆ­ಯಲ್ಲಿ 8 ಚಿನ್ನದ ಪದಕ ಪಡೆದ ನಂಜನ­ಗೂಡಿನ ಎಂ. ಅಕ್ಷತಾ, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಧಾರ­ವಾಡದ ಮಂಜುಳಾ ಮುನವಳ್ಳಿ, ಏಷ್ಯನ್‌ ಕ್ರೀಡಾ­ಕೂಟಕ್ಕೆ ಆಯ್ಕೆ­ಯಾದ ಕಾರವಾರದ ನಿವೇದಿತಾ ಸಾವಂತ್‌ ಅವ­ರಿಗೆ ಅವ್ವ ಪ್ರಶಸ್ತಿ ನೀಡಿ  ಸನ್ಮಾನಿಸಲಾಯಿತು.ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿ.­ಗೋಪಾಲ­ಗೌಡ, ರಾಘವೇಶ್ವರ ಭಾರತಿ ಸ್ವಾಮೀಜಿ, ಕಿರುತೆರೆ ನಟಿ ಜಯಲಕ್ಷ್ಮಿ ಪಾಟೀಲ ಮಾತ­ನಾಡಿದರು. ಬಸವರಾಜ ಹೊರಟ್ಟಿಯವರ ತಾಯಿ ಗುರವ್ವ ಹೊರಟ್ಟಿಯವರ ಸ್ಮರಣಾರ್ಥ ‘ಅವ್ವ ಸೇವಾ ಟ್ರಸ್ಟ್‌’ನಿಂದ ಈ ಪ್ರಶಸ್ತಿ ನೀಡಲಾಗುತ್ತದೆ.

ಪ್ರತಿಕ್ರಿಯಿಸಿ (+)