ನ್ಯೂಯಾರ್ಕ್ (ರಾಯಿಟರ್ಸ್/ ಪಿಟಿಐ): ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಇಲ್ಲಿ ನಡೆಯುತ್ತಿರುವ ಬಿಎನ್ಪಿ ಪಾರಿ ಬಾಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಫೈನಲ್ನಲ್ಲಿ ನಿರಾಸೆ ಅನುಭವಿಸಿದೆ.

ಫೈನಲ್ನಲ್ಲಿ ಸಾನಿಯಾ ಹಾಗೂ ಕಾರಾ 6–7, 2–6ರಲ್ಲಿ ತೈವಾನ್ನ ಸೀ ಸು ವಿ ಹಾಗೂ ಚೀನಾದ ಪೆಂಗ್ ಶುವಾಯಿ ಎದುರು ಪರಾಭವಗೊಂಡು ರನ್ನರ್ ಅಪ್ ಆದರು.

ಐದನೇ ಶ್ರೇಯಾಂಕ ಪಡೆದಿದ್ದ ಸಾನಿಯಾ ಹಾಗೂ ಕಾರಾ ಈ ಟೂರ್ನಿ ಯಲ್ಲಿ ಅಮೋಘ ಪ್ರದರ್ಶನವನ್ನೇ ತೋರಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಹೊಂದಾಣಿಕೆ ಆಟವಾಡು ವಲ್ಲಿ ಎಡವಿದರು. ಒಂದೂವರೆ ಗಂಟೆ ನಡೆದ ಹೋರಾಟದಲ್ಲಿ ಅಗ್ರ ಶ್ರೇಯಾಂಕದ ಸೀ ಸು ವಿ ಹಾಗೂ ಶುವಾಯಿ ಎದುರಾಳಿಯ ಸವಾಲು ಮೆಟ್ಟಿ ನಿಂತರು.

ಪುರುಷರ ವಿಭಾಗದ ಡಬಲ್ಸ್ನಲ್ಲಿ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಯಾನ್ ಸಹೋದರರು ಚಾಂಪಿ ಯನ್ ಆದರು. ಅವರು ಫೈನಲ್ನಲ್ಲಿ 6–4, 6–3ರಲ್ಲಿ ಅಲೆಕ್ಸಾಂಡರ್ ಪೇಯಾ ಹಾಗೂ ಬ್ರುನೊ ಸೋರ್ಸ್ ಎದುರು ಜಯ ಗಳಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಫೈನಲ್ ತಲುಪಿದ್ದಾರೆ. ಇವರಿಬ್ಬರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಉಭಯ ಆಟಗಾರರು ಈಗಾಗಲೇ 33 ಫೈನಲ್ನಲ್ಲಿ ಮುಖಾಮುಖಿಯಾ ಗಿದ್ದಾರೆ. ಅದರಲ್ಲಿ ಫೆಡರರ್ 17–15ರಲ್ಲಿ ಮುಂದಿದ್ದಾರೆ.

ಫೆಡರರ್ ಸೆಮಿಫೈನಲ್ನಲ್ಲಿ 6–3, 6–1ರಲ್ಲಿ ಉಕ್ರೇನ್ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಎದುರು ಗೆದ್ದರು. ಮತ್ತೊಂದು ಸೆಮಿಫೈನಲ್ನಲ್ಲಿ ಜೊಕೊವಿಚ್ 7–5, 6–7, 6–1ರಲ್ಲಿ ಅಮೆರಿಕದ ಜಾನ್ ಇಸ್ನೇರ್ ವಿರುದ್ಧ ಜಯ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.