ಮಂಗಳವಾರ, ಮೇ 24, 2022
31 °C

ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ: ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ದಂತಾಗುತ್ತದೆ. ಅಲ್ಲದೇ ಸರ್ವ ಧರ್ಮದ ಜನರಲ್ಲಿ ಪ್ರೀತಿ ವಿಶ್ವಾಸ ಬೆಳೆಯುತ್ತದೆ ಎಂದು ಮಾಜಿ ಶಾಸಕ ಜಿ.ಎಸ್.ಪಾಟೀಲ ಹೇಳಿದರು.ಅವರು ಶನಿವಾರ ತಾಲೂಕಿನ ಸವಡಿ ಗ್ರಾಮದಲ್ಲಿ ಸೋಮಯ್ಯ ಸ್ವಾಮಿಗಳ 15ನೇ ಪುಣ್ಯ ಸ್ಮರಣೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು.ದಲಿತ ವರ್ಗದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಅಲ್ಲದೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸು ವಂತಹ ಕಾರ್ಯದಲ್ಲಿ ಮಗ್ನರಾಗ ಬೇಕು ಅಂದಾಗ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದರು.ನೂತನ ವಿವಾಹಿತರು, ಜನ್ಮ ನೀಡಿದ ತಂದೆ ತಾಯಿಗಳಿಗೆ ನೋವಾಗದಂತೆ ನಡೆದುಕೊಳ್ಳುವುದನ್ನು ಮೈ ಗೂಡಿಸಿ ಕೊಳ್ಳಬೇಕು ಅವರು ನಮಗೆ ದೊಡ್ಡ ಮಟ್ಟದ ಅಮೂಲ್ಯ ಆಸ್ತಿಯಾಗಿದ್ದಾರೆ ಎಂದರು.ಮುಖಂಡ ಬಸವಂತಪ್ಪ ತಳವಾರ ಮಾತನಾಡಿ. ಪ್ರತಿಯೊಂದು ಸಂಘಟನೆ ಗಳು ಬಡವರಿಗೆ ಪ್ರಯೋಜನವಾಗು ವಂತಹ ಕಾರ್ಯಗಳಲ್ಲಿ ತೊಡಗುವ ಮೂಲಕ ಒಳ್ಳೆಯ ಜನಪರ ಕಾರ್ಯ ಗಳನ್ನು ಕೈಗೊಳ್ಳಬೇಕು ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ. ಗುಲಗಂಜಿ ಮಠದ ಗುರುಪಾದ ದೇವರು, ಮರುಳ ಸಿದ್ಧೇಶ್ವರ ಸ್ವಾಮಿ ಗಳು. ಶಿವಶರಣ ಸ್ವಾಮಿಗಳು. ಗದಿಗೆಯ್ಯ ಸ್ವಾಮಿಗಳು. ಮಾತೋಶ್ರಿ ಶಿವಶರಣೆ ದಯಾನಂದನಿ ಅಂಬಾ ಸದಾಶಿವ, ಷಣ್ಮುಕಪ್ಪಜ್ಜನ ವರು. ಹುಚ್ಚಯ್ಯ ಸ್ವಾಮಿಗಳು. ಮಲ್ಲಜ್ಜನ ವರು ಸೇರಿದಂತೆ ಅನೇಕ ಮಠಾಧೀಶರು ಆಶೀರ್ವಚನ ನಿಡಿದರು. ಸಭೆಯ ಅಧ್ಯಕ್ಷತೆಯನ್ನು. ನಿಂಗಪ್ಪ ಮೊರಬದ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸವಡಿ ಗ್ರಾಮದ ದಲಿತ ಕಾಲೋನಿಯಲ್ಲಿ ದಲಿತ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು. ಒಟ್ಟು 10 ಜೋಡಿ ವಿವಾಹ ನೇರೆವೇರಿ ದವು. ಸಮಾರಂಭದಲ್ಲಿ ಶಿವಣ್ಣ ನವಲ ಗುಂದ, ಎಸ್.ಕೆ. ಚವ್ಹಾಣ, ರಂಗಪ್ಪ ಹೂಗಾರ, ವೀರಯ್ಯೊ ನೆಲ್ಲೂರ, ಚಂದ್ರಪ್ಪ ಬಾವಿಮನಿ, ನಿಂಗಪ್ಪ ಮಾದರ, ಪರಸಪ್ಪ ಪೂಜಾರ, ಪಡಿ ಯಪ್ಪ ಪೂಜಾರ, ಎಂ.ಎಚ್. ನಂದಣ್ಣ ವರ, ಕರೆಯಪ್ಪ ಕಡಬಿನ, ಪ್ರಕಾಶ ಹೊಸಳ್ಳಿ, ಸುರೇಶ ನಡುವಿನಮನಿ, ಮಂಜುನಾಥ ದೊಡ್ಡಮನಿ, ಮುತ್ತು ರಾಜ ದೊಡ್ಡಮನಿ, ಉಮೇಶ ಅರಳಿ ಗಿಡದ ಮುಂತಾದವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.