ಶನಿವಾರ, ಜೂನ್ 19, 2021
27 °C

ಸಾರಾಯಿ ನಿಷೇಧಕ್ಕೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಸಗುಪ್ಪಿ (ಮೂಡಲಗಿ): ಸಾರಾಯಿ ಮತ್ತು ಗುಟಕಾ ಸೇವನೆಯಿಂದ ಯುವ ಜನರು ಹಾಳಾಗಬಾರದೆಂದು ಗ್ರಾಮದ ಭೂಮಿಕಾ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹವನ್ನು ನಡೆಸಿ ಪ್ರತಿಭಟನೆಯನ್ನು ಮಾಡಿದರು.ಯುವಕರು ಸಾರಾಯಿ ಮತ್ತು ಗುಟಕಾ ವ್ಯಸನಕ್ಕೆ ಬಲಿಯಾಗಿ ತಾವು ಹಾಳಾಗುವದರೊಂದಿಗೆ ಕುಟಂಬವನ್ನು ಹಾಳು ಮಾಡುತ್ತಿದ್ದಾರೆ ಮತ್ತು ಗ್ರಾಮದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದಾರೆ ಎಂದು ಸಂಘದ ಮಹಿಳೆಯರು ಪ್ರತಿಭಟನೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ಗ್ರಾ.ಪಂ. ಅಧ್ಯಕ್ಷ ಬಂಡಿನಿಂಗಗೋಳ ಮಹಿಳೆಯರ ಅಹವಾಲನ್ನು ಆಲಿಸಿ ಗ್ರಾಮದಲ್ಲಿ ಸಾರಾಯಿ ಮತ್ತು ಗುಟಕಾ ನಿಷೇದಕ್ಕೆ ತಾವು ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದ ಭರವಸೆ ನೀಡಿದಾಗ ಧರಣಿಯನ್ನು ಹಿಂದಕ್ಕೆ ತೆಗೆದುಕೊಂಡರು.ಗ್ರಾ.ಪಂ. ಸದಸ್ಯ ಸಂಜಯ ಹೊಸಕೋಟಿ, ಲಕ್ಷ್ಮಣ ಕುಡಪ್ಪಗೋಳ, ಕಮಲವ್ವ ಮಾದರ,ದುಂಡಪ್ಪ ಪಾತೋಜಿ,ಎಸ್.ಎ. ಮುರಗೋಡ ಮತ್ತಿತರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.