ಗದಗ: `ರಾಜ್ಯದಲ್ಲಿ ಈಗಾಗಲೇ ಕಳ್ಳಬಟ್ಟಿ ನಿಷೇಧಿಸಲಾಗಿದ್ದು, ಮುಂಬ ರುವ ದಿನಗಳಲ್ಲಿ ಸಂಪೂರ್ಣ ಸಾರಾಯಿ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿ ಸಲಾಗುತ್ತದೆ~ ಎಂದು ಬೆಂಗಳೂರಿನ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಇಲಾಖೆ ಎಸ್ಪಿ ಕುಮಾರ ಎಸ್. ಕರ್ನಿಂಗ್ ಹೇಳಿದರು.

ತಾಲ್ಲೂಕಿನ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಳ್ಳಬಟ್ಟಿ ತಯಾರಿಕೆಯಲ್ಲಿ ತೊಡಗಿದ್ದ ಕುಟುಂಬಗಳ ಸದಸ್ಯರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವ ತರಬೇತಿಯ ಸಮಾರೋಪ ಸಮಾ ರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ನೊಂದು ಸಮಾಜದ ಮುಖ್ಯವಾಹಿನಿಗೆ ಬರದೆ ಹಿಂದುಳಿದ ಜನರಿಗೆ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ಸದುಪಯೋಗ ಪಡೆದು ಕೊಳ್ಳಬೇಕು. ಕಳ್ಳಬಟ್ಟಿ ತಯಾರಿಕೆ ಯಿಂದ ಹಾಗೂ ಅದರ ಸೇವನೆಯಿಂದ ಆಗುವ ದುಷ್ಟರಿಣಾಮಗಳ ಬಗ್ಗೆ ಇಲಾಖೆಯಿಂದ ಶಾಲೆ, ಕಾಲೇಜು ಹಾಗೂ ಗ್ರಾಮ ಸಭೆ, ಜನಸಂಪರ್ಕ ಸಭೆಗಳಲ್ಲಿ ತಿಳಿವಳಿಕೆ ನೀಡುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ ಮಾತನಾಡಿ, ಸರ್ಕಾರ ಅನೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಅದರ ಬಗ್ಗೆ ತಿಳಿವಳಿಕೆ ಪಡೆದು ಅವುಗಳ ಸದ್ಬಳಕೆಯನ್ನು ಎಲ್ಲರೂ ಪಡೆಯಬೇಕು ಎಂದರು. ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತ ಜ್ಞಾನವನ್ನು ಸ್ವ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಸ್ಟೇಟ್ ಬ್ಯಾಂಕಿನ ರೀಜನಲ್ ವ್ಯವಸ್ಥಾಪಕ ಎಚ್.ಎಸ್. ಕಟ್ಟಿ ಮಾತನಾಡಿ, ಮನುಷ್ಯನಿಗೆ ಬದಲಾವಣೆ ಮುಖ್ಯ. ತಮ್ಮ ಸ್ವಭಾವದಲ್ಲಿ ಪರಿವರ್ತನೆ ಮಾಡಿಕೊಂಡು ಸರ್ಕಾರದ ಸೌಲಭ್ಯಗಳನ್ನು ಉಪಯೋಗಿ ಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಟಿ. ದಿನೇಶ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಹೊಲಿಗೆ ಯಂತ್ರ ವಿತರಿಸಲಾಯಿತು.

ತರಬೇತಿಯಲ್ಲಿ 35 ಜನರಿಗೆ ವಿಡಿಯೋಗ್ರಫಿ, ಫೋಟೋಗ್ರಾಫಿ ಮತ್ತು 70 ಜನರಿಗೆ ಭಾರಿ ವಾಹನ ಚಾಲನಾ ತರಬೇತಿ ಹಾಗೂ 114 ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿಯಿಂದ 20, ಸ್ಟೇಟ್ ಬ್ಯಾಂಕಿನ ವಿವಿಧ ಶಾಖೆಗಳಿಂದ 8, ಅಬಕಾರಿ ಲಾಟರಿ ನಿಷೇಧ ಘಟಕದಿಂದ 5, ಅಬಕಾರಿ ಇಲಾಖೆಯಿಂದ 5, ಮದ್ಯ ಮಾರಾಟಗಾರರ ಸಂಘದಿಂದ 8 ಹಾಗೂ ಗಣ್ಯರು, ಸಂಘ-ಸಂಸ್ಥೆಗಳಿಂದ ಒಟ್ಟು 69 ಯಂತ್ರಗಳನ್ನು ತರಬೇತಿ ಪಡೆದ ಮಹಿಳೆಯರಿಗೆ ವಿತರಿಸಲಾಗಿದೆ ಎಂದು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧದ ಸಿಪಿಐ ಡಿ.ಡಿ. ಮಾಳಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಉಪ ಆಯುಕ್ತ ಚಂದ್ರಶೇಖರ ಎನ್, ಸಿ.ಬಿ. ಗಾಣಿಗೇರ, ಬೆಳಗಾವಿಯ ಅಬಕಾರಿ ಜಾರಿ ಲಾಟರಿ ನಿಷೇಧ ದಳದ ಡಿವೈಎಸ್ಪಿ ಪಿ.ಎ. ಕೊರವರ ಮತ್ತಿತರರು ಹಾಜರಿದ್ದರು. ಗಿಟ್ಸರ್ಡ್ನ ನಿರ್ದೇಶಕ ಆರ್.ಎಸ್. ಹೊನಕಟ್ಟಿ ಸ್ವಾಗತಿಸಿದರು. ಉಪನಿರ್ದೇಶಕ ಎಸ್.ಎಸ್. ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.