ಭಾನುವಾರ, ಜನವರಿ 19, 2020
27 °C

ಸಾರ್ಕ್: ಮಹಿಳಾ ಮಹಾ ಕಾರ್ಯದರ್ಶಿ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಪಿಟಿಐ): `ಸಾರ್ಕ್~ನ ಮೊದಲ ಮಹಿಳಾ ಮಹಾ ಕಾರ್ಯದರ್ಶಿ  ಮಾಲ್ಡೀವ್ಸ್‌ನ ಫಾತಿಮತ್ ಧಿಯಾನ ಸಯೀದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಲ್ಡೀವ್ಸ್‌ನ ಆಂತರಿಕ ರಾಜಕೀಯದಲ್ಲಿ ಸಯೀದ್ ತೊಡಗಿಕೊಂಡಿರುವ ಬಗೆಗೆ ಉಂಟಾಗಿರುವ ವಿವಾದದ ನಡುವೆಯೇ ಅವರು ಪದತ್ಯಾಗ ಮಾಡಿದ್ದಾರೆ. ಸಯೀದ್ ರಾಜೀನಾಮೆಯನ್ನು ಕಠ್ಮಂಡುವಿನಲ್ಲಿರುವ `ಸಾರ್ಕ್~ ಆಡಳಿತ ಕಚೇರಿ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.ಸಯೀದ್ ಅವರು 2011ರ ಮಾರ್ಚ್1ರಂದು ಅಧಿಕಾರ ವಹಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)