ಸೋಮವಾರ, ಜನವರಿ 20, 2020
20 °C

ಸಾರ್ವಜನಿಕ ನಲ್ಲಿಯ ದುರ್ಬಳಕೆ

–ನಿವಾಸಿಗಳು Updated:

ಅಕ್ಷರ ಗಾತ್ರ : | |

ಚನ್ನಸಂದ್ರ ಗ್ರಾಮದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ನೀರಿನ ನಲ್ಲಿಯನ್ನು ಹಾಕಿದ್ದರು. ಅಲ್ಲಿ ಎಲ್ಲರೂ ನೀರನ್ನು ಪಡೆಯುತ್ತಿದ್ದರು. ಆದರೆ ಅಲ್ಲೇ ಪಕ್ಕದಲ್ಲಿ ಒಂದು ಹೋಟೆಲ್‌ ಇದೆ. ಅಲ್ಲಿ ಶಾಖಾಹಾರಿ, ಮಾಂಸಾಹಾರಿ ಎರಡೂ ಬಗೆಯ ಆಹಾರ ಲಭ್ಯ. ಈ ಹೋಟೆಲ್‌ನ ಮಾಲೀಕರು ಸ್ವಂತ ಖರ್ಚಿನಲ್ಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳದೆ ಅಲ್ಲೇ ಇದ್ದ ಸಾರ್ವಜನಿಕ ನಲ್ಲಿಯನ್ನೇ ಕಿತ್ತು, ಹೋಟೆಲ್‌ಗೆ ಅಳವಡಿಸಿಕೊಂಡಿದ್ದಾರೆ.

ಅಲ್ಲಿ ಯಾರೂ ಹೋಗಿ ನೀರನ್ನು ಪಡೆಯದಂತೆ ಆ ನಲ್ಲಿಗೆ ಒಂದು ಬೀಗ ಕೂಡ ಹಾಕಿಕೊಂಡಿದ್ದಾರೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಸಂಬಂಧಿಸಿದ ಜಲಮಂಡಳಿಯ ಅಧಿಕಾರಿಗಳಾಗಲೀ ಅಥವಾ ನಗರಸಭೆಯ ಅಧಿಕಾರಿಗಳಾಗಲೀ ಈ ಕಡೆ ಗಮನಹರಿಸಿ ನಲ್ಲಿಯನ್ನು ಮತ್ತೆ ಸಾರ್ವಜನಿಕರಿಗೆ ಹಾಕಿಕೊಡಿಸಬೇಕಾಗಿ ವಿನಂತಿ.

–ನಿವಾಸಿಗಳು

ಪ್ರತಿಕ್ರಿಯಿಸಿ (+)