ಸಾಲ ಬಾಧೆ: ಮೂರಕ್ಕೇರಿದ ರೈತರ ಆತ್ಮಹತ್ಯೆ

7

ಸಾಲ ಬಾಧೆ: ಮೂರಕ್ಕೇರಿದ ರೈತರ ಆತ್ಮಹತ್ಯೆ

Published:
Updated:

ಶಿರಾ: ಸಾಲ ಬಾಧೆಯಿಂದ ರೈತರೊಬ್ಬರು ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬಂದಕುಂಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ತಿಪ್ಪೇಸ್ವಾಮಿ (35) ಆತ್ಮಹತ್ಯೆ ಮಾಡಿಕೊಂಡ ರೈತ. ತಾಲ್ಲೂಕಿನಲ್ಲಿ ಮೂರು ದಿನಗಳ ಹಿಂದೆ ಸಾಲ ಭಾದೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋಮವಾರ ಸಂಜೆಯಷ್ಟೇ ಪಾವಗಡದಲ್ಲಿ ರೈತ ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಿಪ್ಪೇಸ್ವಾಮಿ ಬಿದಿರೆಕೆರೆಯ ತಮ್ಮ ಜಮೀನಿನಲ್ಲಿ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಮಳೆ, ಬೆಳೆ ಇಲ್ಲದೆ ಮಂಡಿ ವರ್ತಕರ ಬಳಿ ಮಾಡಿರುವ ಸಾಲ ತೀರಿಸಲು ಆಗುತ್ತಿಲ್ಲ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾರೆ. ಕಳೆದ ವರ್ಷ ಅವರ ತಮ್ಮ ರಂಗನಾಥ್ ಸಿಡಿಲು ಬಡಿದು ಮೃತಪಟ್ಟಿದ್ದರು. ಆತ್ಮಹತ್ಯೆ ಮಾಡಿಕೊಂಡ ತಿಪ್ಪೇಸ್ವಾಮಿ ಪತ್ನಿ ಜುಂಜಮ್ಮ ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry