ಜನವಾಡ: ಸಾವಯವ ಕೃಷಿಯಿಂದ ರೈತರ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಡಿ. ಉಮೇಶ್ ಹೇಳಿದರು.

ಸಾವಯವ ಭಾಗ್ಯ ಯೋಜನೆ ಅಡಿಯಲ್ಲಿ ಬೀದರ್ ತಾಲ್ಲೂಕಿನ ಇಮಾಮ್ಬಾದ್ ಗ್ರಾಮದ ಪ್ರಕಾಶ ರೆಡ್ಡಿ ಅವರ ಹೊಲದಲ್ಲಿ ಈಚೆಗೆ ಏರ್ಪಡಿಸಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬದಲು ಎರೆ ಹುಳು ಗೊಬ್ಬರ, ತಿಪ್ಪೆ ಗೊಬ್ಬರ, ಬೇವಿನ ಎಣ್ಣೆ, ಪಂಚಗವ್ಯ, ಜೀವಾಮೃತಗಳನ್ನು ಬಳಸಿ ಸಾವಯವ ಕೃಷಿ ಕೈಗೊಂಡಲ್ಲಿ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ರೈತ ಹಿಂದೆಯೂ, ಈಗಲೂ ಅನ್ನದಾತನೇ ಆಗಿದ್ದಾನೆ. ಹೀಗಾಗಿ ಸರ್ಕಾರದ ನೆರವನ್ನು ನಿರೀಕ್ಷಿಸದೆ ಸಾವಯವ ಕೃಷಿ ಮೂಲಕ ಸ್ವಾವಲಂಬಿಯಾಗಬೇಕು ಎಂದು ಹೇಳಿದರು. ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಕಾರಣ ರೈತರು ಸಾವಯವ ಕೃಷಿ ಬಗೆಗೆ ಒಲವು ತೋರಬೇಕು ಎಂದು ಕೃಷಿ ಅಧಿಕಾರಿ ಸಂಜುಕುಮಾರ ಸಲಹೆ ನೀಡಿದರು.

ಸಾವಯವ ಕೃಷಿಯಿಂದ ಭೂಮಿ ಸತ್ವಯುತವಾಗಿ ಇರುತ್ತದೆ. ಅದರಿಂದ ಉತ್ಪಾದಿಸುವ ಆಹಾರ ಧಾನ್ಯ ವಿಷಮುಕ್ತವೂ ಆಗಿರುತ್ತದೆ ಎಂದರು. ಸಾವಯವ ಕೃಷಿಯಲ್ಲಿ ಕೀಟಗಳ ನಿರ್ವಹಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಕೃಷಿ ಅಧಿಕಾರಿ ಗಿರೀಶ ಉಪನ್ಯಾಸ ಮಾತನಾಡಿದರು.

ದೇಸಿ ಗೋವು ಸಾಕಿದ್ದಲ್ಲಿ ಸಾವಯವ ಕೃಷಿಗೆ ಅಗತ್ಯ ಇರುವ ಗಂಜಲು, ಸೆಗಣಿಯಂಥ ಕಚ್ಚಾ ಪದಾರ್ಥಗಳನ್ನು ಪಡೆಯಬಹುದು ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.

ಕೃಷಿ ಅಧಿಕಾರಿ ಚಿತ್ರಾ, ಸಹಾಯಕ ಕೃಷಿ ಅಧಿಕಾರಿ ವಿಠ್ಠಲ, ಪ್ರಗತಿ ಪರ ರೈತ ಪ್ರಕಾಶ ರೆಡ್ಡಿ, ಪ್ರಮುಖರಾದ ಜಗನ್ನಾಥ, ವೆಂಕಟ ರೆಡ್ಡಿ ಪಾಟೀಲ, ಶಿವಕುಮಾರ, ನರಸಾರೆಡ್ಡಿ, ನಾಗಪ್ಪ, ಸಂಗಾರೆಡ್ಡಿ, ರವಿ, ವಿಠ್ಠಲ, ಶಂಕ್ರೆಪ್ಪ ಉಪಸ್ಥಿತರಿದ್ದರು. ಬಸಯ್ಯ ಸ್ವಾಮಿ ಸ್ವಾಗತಿಸಿದರು. ಅಮರನಾಥ ವಂದಿಸಿದರು. ಕೃಷಿ ಇಲಾಖೆ ಹಾಗೂ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

ರೈತರು ಕೃಷಿ ಒಂದನ್ನೇ ಅವಲಂಬಿಸಬಾರದು. ತೋಟಗಾರಿಕೆ, ಹೈನುಗಾರಿಕೆ ಮತ್ತಿತರ ಉಪಕಸುಬುಗಳನ್ನು ಸಹ ಕೈಗೊಳ್ಳಬೇಕು.
- ಶಿವಯ್ಯ ಸ್ವಾಮಿ,
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.