ಶನಿವಾರ, ಮೇ 15, 2021
25 °C

ಸಾವಯವ ಪದ್ಧತಿ ಅಳವಡಿಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಜಮೀನುಗಳಲ್ಲಿ ರಸಗೊಬ್ಬರ ಉಪಯೋಗಿಸದೆ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿ ರೂಢಿಸಿಕೊಂಡರೆ ರೈತರ ಬದಕು ಹಸನಾಗುತ್ತದೆ ಎಂದು ಶಾಸಕ ತಿಪ್ಪೇಸ್ವಾಮಿ ಹೇಳಿದರು.ತಾಲ್ಲೂಕಿನ ನನ್ನಿವಾಳ ಮತ್ತು ಗೊರ‌್ಲಕಟ್ಟೆ ಗ್ರಾಮದಲ್ಲಿ ಈಚೆಗೆ `ಗ್ರೀನ್~ ಪ್ರತಿಷ್ಠಾನ ವತಿಯಿಂದಮಹಿಳಾ ಸ್ವ- ಸಹಾಯ ಸಂಘದವರಿಗೆ ಆಯೋಜಿಸಿದ್ದ ಕೇಂದ್ರ ಸರ್ಕಾರದ ಪ್ರಾಯೋಗಿಕ `ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನಾ ಅರಿವು~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವ್ಯವಸಾಯದಲ್ಲಿ ಹೆಚ್ಚಿಗೆ ರಾಸಾಯನಿಕ ಬಳಕೆ ಮಾಡುವುದರಿಂದ ಭೂಮಿ ಬರಡಾಗಿ ಫಲವತ್ತತೆ ಕಳೆದುಕೊಳ್ಳುತ್ತದೆ. ಇಂತಹ ಭೂಮಿಯಲ್ಲಿ ಬೆಳೆದ ಆಹಾರ ಸೇವಿಸುವ ಪರಿಣಾಮದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಆದ್ದರಿಂದ ನಾವು ರಾಸಾಯನಿಕ ಬಳಸದೇ ಬೆಳೆ ಬೆಳೆಯುವ ಕಡೆಗೆ ಹೆಚ್ಚು ಆಸಕ್ತಿ ತೋರಬೇರ ಎಂದು ತಿಳಿಸಿದರು.ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢಗೊಳ್ಳಲು ಹಲವು ಯೋಜನೆಗಳನ್ನು ರೂಪಿಸಿದೆ. ಇಂತಹ ಯೋಜನೆಗಳನ್ನು ಮಹಿಳೆಯರು ಸಮರ್ಪಕ ರೀತಿಯಲ್ಲಿ ಸದ್ಬಳಿಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.ಗ್ರಾಮೀಣ ಪ್ರದೇಶದ ಮಹಿಳೆಯರು ಪ್ರತಿನಿತ್ಯ ಕೃಷಿಯಲ್ಲಿಯೇ ಹೆಚ್ಚು ಸಮಯ ಕಳೆಯುವುದರಿಂದ ಇದೇ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು. ಆಗ ಮಾತ್ರ ಮಹಿಳೆಯರ ಬದುಕು ಉತ್ತಮಗೊಳ್ಳುವ ಜತೆಗೆ ಆರ್ಥಿಕವಾಗಿ ಕುಟುಂಬಗಳು ಸದೃಢಗೊಳ್ಳುತ್ತವೆ ಎಂದರು. `ಗ್ರೀನ್~ ಪ್ರತಿಷ್ಠಾನದ ಮುಖ್ಯ ಕಾರ್ಯ ನಿವಾರ್ಹಕ ಕೆ.ಪಿ. ಸುರೇಶ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ರೈತರು ವ್ಯವಸಾಯದಲ್ಲಿ ಹೆಚ್ಚಿಗೆ ಹಣ ವ್ಯಯ ಮಾಡುತ್ತಿರುವುದು ಇದಕ್ಕೆ ಕಾರಣ. ಬೆವರಿಗೆ ಸರಿಯಾದ ಪ್ರತಿಫಲ ಸಿಗದೆ ಇರುವುದರಿಂದ ರೈತ ಆತ್ಮಹ್ಯತೆಗೆ ಶರಣಾಗುತ್ತಿದ್ದಾರೆ ಎಂದು ವಿವರಿಸಿದರು.ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗಗಳಲ್ಲಿ ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ನಮ್ಮ ಹಳೆಯ ನಾಟಿ ಬೀಜದ ತಳಿಗಳನ್ನು ಸಂರಕ್ಷಿಸುವುದು, ಪೌಷ್ಟಿಕಾಂಶವುಳ್ಳ ತರಕಾರಿ ಬೆಳೆಸಲು ಕೈತೋಟಗಳನ್ನು ನಿರ್ಮಿಸಲಾಗುವುದು. ಸ್ವ ಸಹಾಯ ಸಂಘಗಳ ಮೂಲಕ ಸುಮಾರು 50 ಸಾವಿರ ನರ್ಸರಿ ಗಿಡಗಳನ್ನು ಬೆಳಸಲಾಗುವುದು ಎಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ  ಸಣ್ಣಬೋರಮ್ಮ ದೊರೆಬೈಯಣ್ಣ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯೆ ನಿರ್ಮಲಾಬಾಯಿ, ಗ್ರಾ.ಪಂ. ಸದಸ್ಯೆ ಶಾರದಮ್ಮ , ನನ್ನಿವಾಳ ಗ್ರಾ.ಪಂ. ಸದಸ್ಯ ಮಾರ್ಕಂಡೇಯ, ತಾ.ಪಂ.ಮಾಜಿ ಉಪಾಧ್ಯಕ್ಷ ದೊರೆಬೈಯಣ್ಣ, `ಗ್ರೀನ್~ ಪ್ರತಿಷ್ಠಾನದ ರುಕ್ಕಮ್ಮ, ಮಹಾಂತೇಶ್ ಮುಂತಾದವರು ಉಪಸ್ಥಿತರಿದ್ದರು.ವ್ಯವಸ್ಥಾಪಕಿ ಕುಸುಮಾಕ್ಷಿ ಸ್ವಾಗತಿಸಿದರು. ಧನಲಕ್ಷ್ಮೀ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.