ಕೆಲವೊಮ್ಮೆ ಅತಿಯಾದ ಶಿಸ್ತು ಮಕ್ಕಳ ಪಾಲಿಗೆ ಮಮತೆಯನ್ನು ಮರೀಚಿಕೆಯನ್ನಾಗಿಸುತ್ತದೆ. ಹುಬ್ಬಳ್ಳಿ ಸೀಮೆಯಲ್ಲಿ ಫೇಮಸ್ ಆಗಿರುವ ದೇಶಪಾಂಡೆ ಮನೆತನದಲ್ಲಿ ಹುಟ್ಟಿದ ನನಗೆ ತೀರಾ ಸಣ್ಣ ವಯಸ್ಸಿಗೇ ಆ ಸ್ಥಿತಿಯ ಪರಿಚಯವಾಗಿತ್ತು. ತುಂಬಿದ ಮನೆಯಾದರೂ ಪ್ರೀತಿ ಬರಿದಾದಂತೆ, ಹತ್ತಿರವೇ ಸುಳಿದಾಡುತ್ತಿದ್ದರೂ ಪರಸ್ಪರ ಅಂತರದ ಗೋಡೆ ಎದ್ದಂತೆ.

ಇದು ಆಗ ನಮ್ಮ ಮನೆಯಲ್ಲಿದ್ದ ವಾತಾವರಣ. ತಂದೆ ತಾಯಿ ಪ್ರೀತಿ ಯಥೇಚ್ಛವಾಗಿ ತಾಕಿದ ನೆನಪೇ ನನಗಿಲ್ಲ. ಆಸುಪಾಸಿನ ಮಕ್ಕಳನ್ನು ನೋಡಿದಾಗ ಯಾವ ಹಂಗೂ ಇಲ್ಲದೆ ಪ್ರೀತಿಯಲ್ಲಿ ತೋಯಬೇಕು ಎಂಬ ಉತ್ಕಟ ಆಸೆಯಾಗುತ್ತಿತ್ತು. ಸಾಮಾನ್ಯವಾಗಿ ಇಂಥ ಸ್ಥಿತಿಯಲ್ಲಿ ಬೆಳೆದ ಅನೇಕರು ಅಂತರ್ಮುಖಿಗಳಾಗಿಬಿಡುತ್ತಾರೆ.

ಮಾತನ್ನೆಲ್ಲ ಮೌನದ ಚಿಪ್ಪಿನೊಳಗೆ ಅವಿತಿಟ್ಟುಕೊಂಡವರಂತೆ ಬದುಕುವವರೂ ಇದ್ದಾರೆ. ಆದರೆ ನಾನು ಅದೆಲ್ಲದಕ್ಕೆ ತದ್ವಿರುದ್ಧ. ನನಗೆ ಏನು ಸಿಕ್ಕಿಲ್ಲವೋ ಅದನ್ನು ಇತರರಿಗೆ ಸಿಗೋ ಹಾಗೆ ಮಾಡಬೇಕೆಂದು ಅಂದುಕೊಂಡೆ. ಮಾತು ಬಂದಂದಿನಿಂದಲೂ ಪರಮ ವಾಚಾಳಿ ಎನಿಸಿಕೊಂಡೆ.

ತೀರಾ ಮೂರು ನಾಲ್ಕನೇ ಕ್ಲಾಸಲ್ಲಿ ಕಲಿಯುವಾಗಲೇ ನಾನು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಬೇಕು, ಎಲ್ಲರೂ ಗುರುತಿಸುವಂತಾಗಬೇಕು ಎಂದು ಹಂಬಲಿಸಲಾರಂಭಿಸಿದ್ದೆ. ಅದಕ್ಕೆ ಪೂರಕವಾಗಿ ಶಾಲಾ ದಿನಗಳಲ್ಲಿಯೇ ಎಲ್ಲಿ ಜನಸಂದಣಿ, ಹರಟೆ, ನಗೆ ಹೊಮ್ಮುತ್ತಿರುತ್ತದೆಯೋ ಅಲ್ಲಿ ನಾನಿರುತ್ತೇನೆ ಎಂಬಂತೆ ಬೆಳೆದೆ. ಮಾತು ಯಾವತ್ತೂ ಸಮಸ್ಯೆ ಆಗಲೇ ಇಲ್ಲ.

ಬೆಳೆಯುತ್ತಾ ಹೋದಂತೆಲ್ಲ ಎಲ್ಲರೂ ಗುರುತಿಸುವಂತಾಗಬೇಕೆಂಬ ಹಂಬಲವೂ ಬೆಳೆಯುತ್ತಾ ಹೋಯಿತು. ಜತೆಗೆ ಶಾಲಾ ದಿನಗಳಲ್ಲಿಯೇ ಚಿತ್ರಕಲೆ, ಗಾಯನ ಹಾಗೂ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಶಿಕ್ಷಣ ಮಾತ್ರ ಅದಕ್ಕೆ ವಿರುದ್ಧವಾದದ್ದು. ಕಲಿತದ್ದು ಕಂಪ್ಯೂಟರ್ ಸೈನ್ಸ್. ಸಿಕ್ಕಿದ್ದು ಸಾಫ್ಟ್ವೇರ್ ಎಂಜಿನಿಯರ್ ಕೆಲಸ. ಮತ್ತೆ ಕೆಲ ಸಮಯ ವೆಬ್ ಡಿಸೈನರ್ ಆಗಿಯೂ ಕಸುಬು ಮಾಡಬೇಕಾದ ಅನಿವಾರ್ಯ. ಹೀಗಿರುವಾಗಲೇ ಅದೊಂದು ದಿನ ಗೆಳೆಯನೊಬ್ಬನಿಂದ ಎಫ್ಎಂ ಒಂದರ ಆರ್ಜೆ ಆಡಿಷನ್ನಿನಲ್ಲಿ ಪಾಲ್ಗೊಂಡೆ. ಆರ್ಜೆ ಆಗಿ ಆಯ್ಕೆಯೂ ಆದೆ. ಸಲೀಸಾಗಿ ಕೆಲಸ ಸಿಕ್ಕಂತಾಗಿತ್ತು. ಆ ನಂತರದಲ್ಲಿ ಸಿಕ್ಕ ಜನಸ್ಪಂದನ, ಖುಷಿ ಆ ಕೆಲಸವೇ ಸ್ವರ್ಗವೆಂದು ಭಾಸವಾಗುವಂತೆ ಮಾಡಿತ್ತು.

ಒಂದೂವರೆ ವರ್ಷದಿಂದೀಚೆಗೆ ನಾನು 92.7 ಬಿಗ್ ಎಫ್ಎಂನಲ್ಲಿ ಆರ್ಜೆಯಾಗಿ ಕೆಲಸ ಮಾಡುತ್ತಿದ್ದೇನೆ. ನಿಜಕ್ಕೂ ಇದು ತುಂಬಾ ಸುಖದ, ಸೊಗಸಿನ ಕೆಲಸ. ಚಿಕ್ಕಂದಿನಲ್ಲಿ ಯಾವ ಕೊರತೆಯಿಂದ ಕಂಗೆಟ್ಟಿದ್ದೆನೋ ಅದೆಲ್ಲವನ್ನು ಯಾರೋ ಗುರುತು ಪರಿಚಯವಿರದವರು ನೀಗಿಸುತ್ತಿದ್ದಾರೆ. ಯಾರಿಗೋ ಅಣ್ಣನಾಗಿ, ತಮ್ಮನಾಗಿ, ಪ್ರೇಮಿಯಾಗಿ, ಮಗನಾಗಿ ಪ್ರೀತಿ ಪಡೆಯುವಂತಹ ಈ ವೃತ್ತಿ ಸ್ವರ್ಗವಲ್ಲದೇ ಮತ್ತಿನ್ನೇನು? ಕೆಲವು ಮಂದಿ `ಅದೇನು ಮಹಾ, ಮೂರು ಗಂಟೆ ಮಾತಾಡ್ತೀರಿ ಒಂದಷ್ಟು ಹಾಡು ಹಾಕ್ತೀರಿ ಅಷ್ಟೇ ತಾನೆ' ಅಂತ ಕೇವಲವಾಗಿ ಮಾತಾಡೋದಿದೆ.

ಆದರೆ ಮಾತಾಡೋರೆಲ್ಲ ಆರ್ಜೆ ಆಗೋಕೆ ಸಾಧ್ಯವಿಲ್ಲ. ಅದು ದೂರದಿಂದ ಕರೆ ಮಾಡಿದ ಜೀವಗಳ ಮನದಾಳ ಅರ್ಥೈಸಿಕೊಂಡು ಅದಕ್ಕೆ ತಕ್ಕುದಾಗಿ ಸ್ಪಂದಿಸುವ ಕುಸುರಿಯಂಥ ಕೆಲಸ. ಸಂಬಂಧ, ಪ್ರೀತಿಯನ್ನು ಕಳೆದುಕೊಂಡು ಆ ಭಾರ ಇಳಿಸಿಕೊಳ್ಳಲೆಂದೇ ಕರೆ ಮಾಡಿದವರು, ಈ ಬದುಕಿನ ನಾನಾ ಏಟುಗಳಿಗೆ ಎದೆ ಕೊಟ್ಟು ಕಂಗಾಲಾದವರು... ಹೀಗೆ ಪ್ರತಿಯೊಬ್ಬರಿಗೂ ಒಂದು ಸಮಾಧಾನ, ಚಿಕ್ಕ ಖುಷಿಯನ್ನು ನೀಡುವ ಮನಸ್ಸಿರುವವರು ಮಾತ್ರ ಯಶಸ್ವಿ ಆರ್ಜೆಗಳಾಗಲು ಸಾಧ್ಯ. ಬಾಲ್ಯದಿಂದಲೂ ಕಂಡುಂಡ ಕಷ್ಟ, ಅನುಭವಗಳೇ ನನಗೆ ಆ ಮನಸ್ಥಿತಿಯನ್ನು ಕಲ್ಪಿಸಿವೆ.

ಬೇರೆ ಬೇರೆ ಮನಸ್ಥಿತಿಯ ಜನರೊಂದಿಗೆ ಪ್ರತಿದಿನ ಬೆರೆಯುವ ಕಸುಬು ನನ್ನದು. ಕಾಲೆಳೆಯುತ್ತಲೇ ಯಾರದ್ದೋ ನೋವಿಗೆ ಸ್ಪಂದಿಸುವ ಮಾರ್ಗ ಕಂಡುಕೊಂಡಿದ್ದೇನೆ. ಕೆಲವೊಮ್ಮೆ ಆ ಜನರ ಪ್ರೀತಿ ಕಂಡು ಮೂಕನಾಗುತ್ತೇನೆ. ಯಾಕೆಂದರೆ ನಾವು ನೋವಿನಿಂದ ಕೆಮ್ಮಿದರೂ ಮಿಡಿಯುವ ಲೆಕ್ಕವಿರದಷ್ಟು ಹೃದಯಗಳು ಆರ್ಜೆ ಕೆಲಸದ ಮೂಲಕವೇ ಸೃಷ್ಟಿಯಾಗಿವೆ. ನಾನೊಂದು ಶೋನಲ್ಲಿ ಸುಮ್ಮನೆ ಮಾತಿಗೆಂದು `ಇವತ್ಯಾಕೋ ತುಂಬಾ ಹಸಿವಾಗ್ತಿದೆ' ಅಂದಿದ್ದೆ.

ಸ್ವಲ್ಪ ಹೊತ್ತಿನಲ್ಲಿಯೇ ಕೆಲ ತಾಯಂದಿರು ಬುತ್ತಿ ಹಿಡಿದು ಆಫೀಸಿನ ಮುಂದೆ ಬಂದಿದ್ದರು! `ನಂಗೆ ನೀನು ಮಗನಿದ್ದಂತೆ' ಅಂತ ಕೈತುತ್ತು ತಿನ್ನಿಸಿದ್ದರು. ಇನ್ನೊಂದು ಶೋ ನಡೆಯುವ ಹೊತ್ತಿಗೆ ನನ್ನ ಪ್ರೀತಿಯ ನಾಯಿ ಸತ್ತಿತ್ತು. ಆ ವಿಚಾರವನ್ನು ಹೇಳಿಕೊಂಡಿದ್ದೆ. ಮಾರನೇ ದಿನ ಆಫೀಸಿಗೆ ಬರುತ್ತಲೇ ತುಂಬಾ ಜನ ನಾಯಿ ಮರಿಗಳನ್ನ ಹಿಡಿದು ನಿಂತಿದ್ದರು. ಇದೆಲ್ಲವೂ ಆರ್ಜೆಯಾಗಿ ನನ್ನ ಬದುಕಿನ ಸ್ಮರಣೀಯ ಕ್ಷಣಗಳು.

ಟಿ.ವಿ. ಕಾರ್ಯಕ್ರಮ, ರಿಯಾಲಿಟಿ ಶೋ ನಿರೂಪಣೆ ಅಂತೆಲ್ಲಾ ಸುತ್ತಾಡಿದರೂ ರೇಡಿಯೊ ಎಂಬ ಮಾಯೆ ಮತ್ತೆ ಮತ್ತೆ ಸೆಳೆಯುತ್ತಲೇ ಇದೆ. ಈ ನಡುವೆ ಉತ್ತಮ ಟಿ.ವಿ. ಶೋ ಒಂದನ್ನು ಮುನ್ನಡೆಸಬೇಕೆಂಬ ಹಂಬಲ ಇದೆ. ಯುವಕರ ತಂಡವೊಂದು ರೂಪಿಸುತ್ತಿರುವ `ಆರೋಹಿ' ಎಂಬ ವಿಡಿಯೋ ಆಲ್ಬಂನಲ್ಲಿ ಹೀರೋ ಆಗಿ ನಟಿಸುತ್ತಿರೋದು ತುಂಬಾ ಖುಷಿ ಕೊಟ್ಟಿದೆ.

ರೇಡಿಯೊ ಎಫ್ಎಂ ಅನ್ನು ವಸ್ತುವಾಗಿಸಿಕೊಂಡು ಮಾಡುವ ಧಾರವಾಹಿಗಳಲ್ಲಿ ನಟಿಸುವ ಇರಾದೆಯೂ ಇದೆ. ಆದರೆ ನಾನೀಗ ಮಾಡುತ್ತಿರುವ ಕೆಲಸಕ್ಕೆ, ಅದು ನೀಡುವ ಆತ್ಮ ತೃಪ್ತಿಗೆ ಅದೇ ಸಾಟಿ. ಮಾತಾಡುತ್ತಲೇ ಮನಸು ಗೆಲ್ಲುವ ಸುಖಕ್ಕೆ ಏನೆನ್ನಲಿ?
ನಿರೂಪಣೆ: ರಮ್ಯಶ್ರೀ ಬಿ.ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.