ಭಾನುವಾರ, ಜೂನ್ 20, 2021
29 °C

ಸಾಹಿತ್ಯ ರಚನೆ ಎಲ್ಲರಿಂದಲೂ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಸಾಹಿತ್ಯ ಕ್ಷೇತ್ರ ಕೆಲವೇ ವರ್ಗಕ್ಕೆ ಸೀಮಿತವೆಂಬ ಕಲ್ಪನೆ ಬಿಟ್ಟು, ಇತರೆ ಹಿಂದುಳಿದ ವರ್ಗದ ಸಮಾಜ ಸಾಹಿತ್ಯ ರಚನೆಯಲ್ಲಿ ಮುಂದಾಗಬೇಕಿದೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಜಿ.ನಾಗರಾಜಪ್ಪ ತಿಳಿಸಿದರು.ಪಟ್ಟಣದಲ್ಲಿ ದೇವಾಂಗ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಯಿಂದ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೆಲವೇ ವರ್ಗದ ಹಿಡಿತದಲ್ಲಿರುವ ಸಾಹಿತ್ಯ ಕ್ಷೇತ್ರಕ್ಕೆ ಎಲ್ಲ ಹಿಂದುಳಿದ ವರ್ಗಗಳ ಸಮಾಜದ ಬರಹಗಾರರು ಬರಬೇಕಿದೆ. ನಟನಾ ಕೌಶಲ್ಯದ ಜೊತೆ ಕರಕುಶಲತೆ ಮೈಗೂಡಿಸಿಕೊಂಡು ಬದುಕುತ್ತಿರುವ ದೇವಾಂಗ ಸಮಾಜ ಸಾಹಿತ್ಯಾಸಕ್ತಿ ಹೊಂದಬೇಕಿದೆ ಎಂದರು.ಸಾಹಿತಿ ಎಂ.ವಿ.ನಾಗರಾಜರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಪುಟ್ಟಶಂಕರಪ್ಪ, ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಡಿ.ಎಸ್.ಸೂರ್ಯನಾರಾಯಣರಾವ್, ಪುರಸಭಾ ಸದಸ್ಯರಾದ ಸಿ.ಟಿ.ವರದರಾಜು, ಸಿ.ಕೆ.ಕೃಷ್ಣಮೂರ್ತಿ, ಸಿ.ಎಸ್.ಈಶ್ವರ ಭಾಗವತ್ ಮಾತನಾಡಿದರು.ಡಾ.ಪುಷ್ಪವಾಸುದೇವ್ ಅವರನ್ನು ಸನ್ಮಾನಿಸಲಾಯಿತು. ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕೋದಂಡರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಎಂ.ಬನಶಂಕರಯ್ಯ ಸ್ವಾಗತಿಸಿದರು. ಸಿ.ಎ.ಕುಮಾರಸ್ವಾಮಿ ನಿರೂಪಿಸಿದರು. ಜಯಕೃಷ್ಣ ವಂದಿಸಿದರು.24, 25ಕ್ಕೆ ಕ್ರಿಕೆಟ್

ಹುಳಿಯಾರು: ಇಲ್ಲಿಗೆ ಸಮೀಪದ ಸೋಮನಹಳ್ಳಿ ಗ್ರಾಮದ ಸೇವಾಲಾಲ್ ಯುವಕ ಸಂಘದ ವತಿಯಿಂದ ಮಾ.24, 25ರಂದು ಜಿಲ್ಲಾ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.ಸೀಮಿತ 6 ಓವರ್‌ಗಳ ಪಂದ್ಯವಾಗಿದ್ದು ಪ್ರವೇಶ ಶುಲ್ಕ 250. ಪ್ರಥಮ ಬಹುಮಾನ ರೂ.3ಸಾವಿರ, ದ್ವಿತೀಯ ಬಹುಮಾನ ರೂ.2ಸಾವಿರ ಇದ್ದು ಆಸಕ್ತರು ಮೊ.89713 02951, 8095876950 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.