ಶುಕ್ರವಾರ, ಮೇ 14, 2021
30 °C

ಸಾಹಿತ್ಯ ಸಮ್ಮೇಳನಕ್ಕೆ ಅಪಶ್ರುತಿ ಛಾಯೆ

ಪ್ರಜಾವಾಣಿ ವಾರ್ತೆ/ ಎಂ.ಜೆ. ಶ್ರೀನಿವಾಸ Updated:

ಅಕ್ಷರ ಗಾತ್ರ : | |

ಗಂಗಾವತಿ: ಭತ್ತದ ಖಣಜ ಎಂಬ ಹಿರಿಮೆಯ ಗಂಗಾವತಿ ನಗರದಲ್ಲಿ ನವೆಂಬರನಲ್ಲಿ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಇನ್ನೂ ಎರಡು ತಿಂಗಳು ಬಾಕಿ ಇರುವಂತೆಯೇ ಭರದ ಸಿದ್ಧತೆ ಆರಂಭವಾಗಿವೆ.ಸಿದ್ಧತೆಯ ಪೂರ್ವಭಾವಿ ವ್ಯವಸ್ಥೆ ಮತ್ತು ಸಮ್ಮೇಳನದ ಯಶಸ್ವಿಗಾಗಿ ಈಗಾಗಲೇ ಸುಮಾರು 25ಕ್ಕೂ ಹೆಚ್ಚು ವಿವಿಧ ಸಮಿತಿ ಮತ್ತು ಉಪ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಲ್ಲದೇ ಸಮಿತಿಗಳು ಈಗಾಗಲೆ ಸುಮಾರು 36ಕ್ಕೂ ಹೆಚ್ಚು ಬಾರಿ ಸಭೆ ನಡೆಸಿ ಸಮ್ಮೇಳನ ರೂಪುರೇಷೆ ಸಿದ್ದಪಡಿಸಿವೆ.ಆದರೆ 78ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕೇವಲ ಹಾಲಿ ರಾಜಕಾರಣಿಗಳಿಗಷ್ಟೆ ಸೀಮಿತವಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡ ತೊಡಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಾಜಿ ರಾಜಕಾರಣಿಗಳನ್ನು ಸಮ್ಮೇಳನದ ಪ್ರತಿಯೊಂದು ಸಭೆಗೆ ನಿರ್ಲಕ್ಷಿಸಲಾಗುತ್ತಿದೆ.ಜತೆಗೆ ಸಮ್ಮೇಳನದ ಏರ್ಪಾಡುಗಳಿಗಾಗಿ ಅಸ್ತಿತ್ವಕ್ಕೆ ತರಲಾದ ಯಾವೊಂದು ಸಮಿತಿಯಲ್ಲಿಯೂ ನಗರದ ಪ್ರಮುಖ ಮಾಜಿ ರಾಜಕಾರಣಿಗಳನ್ನು ಸೇರಿಸಿಲ್ಲದಿರುವುದು ಸಮ್ಮೇಳನ ಸಂಘಟಕರತ್ತ ಸಾರ್ವಜನಿಕರು ಅನುಮಾನದ ಚಿತ್ತ ಹರಿಸುವಂತಾಗಿದೆ.ಈ ಬಗ್ಗೆ ಸಮ್ಮೇಳನದ ಸಂಘಟಕರು, ವಾಸ್ತವದ ಗುಟ್ಟು ಬಿಟ್ಟುಕೊಡುತ್ತಿಲ್ಲ. `ಮಾಜಿ ರಾಜಕಾರಣಿಗಳನ್ನು ಗೌರವ ಪೂರ್ವಕವಾಗಿ ಸಲಹಾ ಸಮಿತಿಯಲ್ಲಿ ಹಾಕಿಕೊಳ್ಳಲಾಗಿದೆ~ ಎಂದು ಹೇಳುತ್ತಾರೆ. ಆದರೆ ಸಲಹಾ ಸಮಿತಿಯ ಒಂದೇ ಒಂದು ಸಭೆ ಈವರೆಗೆ ನಡೆದಿಲ್ಲ.ಸಮ್ಮೇಳನದ ಲಾಂಛನ ಬಿಡುಗಡೆಯಿಂದ ಹಿಡಿದು, ಇಲ್ಲಿವರೆಗೆ ಅಂದರೆ, ವಿವಿಧ ಉಪ ಸಮಿತಿಗಳು ಈಗಾಗಲೆ 36 ಬಾರಿ ಸಭೆ ನಡೆಸಿವೆ. ಆದರೆ ಇದುವರೆಗೂ ಯಾವೊಬ್ಬ ಮಾಜಿ ರಾಜಕಾರಣಿ ಸಮ್ಮೇಳನದ ಕಚೇರಿಗೆ ಕಾಲಿಟ್ಟಿಲ್ಲ.ಹಾಲಿ ರಾಜಕಾರಣಿಗಳ ಇಚ್ಛಾನುಸಾರ ಸಮ್ಮೇಳನದ ದರ್ಬಾರು ನಡೆಯುತ್ತಿದೆ. ಕೈ-ಕೈ ಜೋಡಿಸಿದರೆ ಮಾತ್ರ ಚಪ್ಪಾಳೆ ಯಾಗುತ್ತದೆ. ಹಾಗೆಯೆ ಸಂಘಟಕರು ಎಲ್ಲರೊಂದಿಗೆ ಸಮನ್ವಯ ಸಾಧಿಸಿದರೆ ಮಾತ್ರ ಸಮ್ಮೇಳನ ಯಶಸ್ವಿಗೆ ಯಾಗಲಿದೆ ಎಂಬ ಮಾತು ಸಾಹಿತ್ಯಾಸಕ್ತರಿಂದ ಕೇಳಿ ಬರುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.